ತಡೆ ಇಲ್ಲದೆ ಅಕ್ರಮವಾಗಿ ಸಾಗುತ್ತಿದೆ ಮದ್ಯ

ಸಂಜೆವಾಣಿ ವಾರ್ಥೆ
ಸಿರುಗುಪ್ಪ  ಜ 15 : ತಾಲೂಕಿನಲ್ಲಿ ಶುಕ್ರವಾರ ಸಂಜೆ 8ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆಯವರಿಗೆ ವಾರಾಂತ್ಯದ ಕಪ್ರ್ಯೂ ಜಾರಿ ಇರುವುದರಿಂದ ಎರಡು ದಿನಕ್ಕೆ ಬೇಕಾಗವಷ್ಟು ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿತು.
    ತಾಲೂಕಿನ ನಗರ, ಪಟ್ಟಣ ಸೇರಿದಂತೆ ಗಡಿ ಗ್ರಾಮಗಳಿಂದ ನೆರೆಯ ಆಂದ್ರಪ್ರದೇಶದ ಆಲೂರು ಮತ್ತು ಆದೋನಿ ತಾಲೂಕಿಗೆ ಒಳಪಡುವ ಹಗರಿ ಸಾಲಿನ ಗ್ರಾಮಗಳಾದ  ಗೂಳ್ಯಂ, ಕೋಗಿಲತೋಟ, ಅಮೃತಾಪುರಂ, ಬಲ್ಲೂರು, ಮುದ್ದಟಿಮಾಗಿ ಗ್ರಾಮಗಳಿಗೆ ಇಲ್ಲಿಂದಲೇ ಸರಬರಾಜು ಮಾಡಲೆಂದೇ ಈ ಭಾಗದಲ್ಲಿ ಬ್ಲೂ ಲಯನ್ ವೈನ್ಸ್ ಬಾರ್ ತೆಗೆಯಲಾಗಿದೆನ್ನುವ ರೀತಿಯಲ್ಲಿ  ದ್ವಿಚಕ್ರ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದರಿಂದ ತಿಳಿಯುತ್ತದೆ.
    ಇನ್ನೂ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಬೀಡಿ ಅಂಗಡಿಗಳಲ್ಲೂ ಮಾರಾಟ ಮಾಡುತ್ತಿರುವ ಬಗ್ಗೆ ಕಳೆದ ಕೆ.ಡಿ.ಪಿ ಸಭೆಯಲ್ಲಿ ಶಾಸಕರು ತರಾಟೆಗೆ ತೆಗೆದುಕೊಂಡಿದ್ದರೂ ಏನೂ ಆಗಿಲ್ಲವೆಂಬ ಅಬಕಾರಿಗಳು ಮೌನವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
      ಅಕ್ರಮ ಮದ್ಯ ಸಾಗಾಣಿಕೆ ಕುರಿತು ಅಬಕಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಕ್ರಮ ಕುರಿತು ತಿಳಿಸಿದರು ಅಲ್ಲಿನ ಅಧಿಕಾರಿಗಳು ನಮ್ಮ ಕಛೇರಿಗೆ ಬಂದು ಲಿಖಿತ ರೂಪದಲ್ಲಿ ಅಕ್ರಮ ಮಾಡುವವರ ವಿರುದ್ದ ದೂರು ನೀಡಿದರೆ ಅವರ ವಿರುದ್ದ ಕ್ರಮ ಜರುಗಿಸುತ್ತೆವೆಂದು ಸಬೂಬು ನೀಡುತ್ತಿದ್ದಾರೆಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದರು.