ಇಂಡಿ:ಜೂ.19: ರಾಜ್ಯ ಕಾಂಗ್ರೆಸ್ ಸರಕಾರದ ನೂತನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿವಿಧ ಇಲಾಖೆಗಳ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ಮತ್ತು ಬಾಕಿ ಮೊತ್ತ ಬಿಡುಗಡೆ ಮಾಡದಂತೆ ಹೊರಡಿಸಲಾಗಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಪ್ರಥಮ ದರ್ಜೆಯ ಗುತ್ತಿಗೆದಾರ ಶಂಕರ .ಬಿ ಯಳಕೋಟಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಆದೇಶದನ್ವಯ ನೀರಾವರಿ .ಲೋಕೋಪಯೋಗಿ, ಗ್ರಾಮೀಣಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳ ನಿಗಮ ಮಂಡಳಿಗಳ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ಸುತ್ತೋಲೆ ಹೋರಡಿಸಲಾಗಿದೆ. ಪೂರ್ಣಗೊಂಡಿರುವ ಕಾಮಗಾರಿಗಳನ್ನು ಬಾಕಿ ಮೊತ್ತ ಬಿಡುಗಡೆ ಮಾಡದಂತೆ ಆದೇಶ ಮಾಡಲಾಗಿತ್ತು.
ಸದ್ಯ ರಾಜ್ಯದ ಬಹುಸಂಖ್ಯಾತ ಗುತ್ತಿಗೆದಾರರು ಆರ್ಥಿಕವಾಗಿ ಸಾಕಷ್ಟು ತೀವೃ ತೊಂದರೆಯಾಗಿದೆ. ಕಾಮಗಾರಿ ನಿಲ್ಲಿಸಿದರೆ ಗುಣಮಟ್ಟ ಕಾಪಾಡಿಕೊಳ್ಳಲು ಅಸಾಧ್ಯೆ. ಅಲ್ಲದೆ ರಾಜ್ಯದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತದೆ ಕಾನೂನು ಬದ್ದವಾಗಿ ನಡೆದಿರುವ ಕಾಮಗಾರಿಗಳನ್ನು ಮುಂದೆವರೆಸಲು ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಬಿಡುಗಡೆ ಮಾಡಲು ಯಾವುದೇ ತಡೆಯೋಡ್ಡಬಾರದು ಆದ್ದರಿಂದ ಈ ಸಂಬಂಧ ಹೊರಡಿಸಲಾದ ಸುತ್ತೋಲೆಯನ್ನು ಹಿಂಪಡೆದು ತಮ್ಮ ಆದೇಶ ಮಾಡಿರುವ ಸುತ್ತೋಲೆ ಕೂಡಲೇ ರಾಜ್ಯದ ವಿವಿಧ ಇಲಾಖೆಗಳಿಗೆ ಸೂಚನೆ ಕಳುಹಿಸಿ ಆರ್ಥಿಕ ತೊಂದರೆಗೀಡಾದ ಗುತ್ತಿಗೆದಾರರಿಗೆ ಅನುಕೂಲ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.