ತಡವಾಗಲಿದೆ ಪುಷ್ಪ 2 ಚಿತ್ರದ ಬಿಡುಗಡೆ

ಹೈದರಾಬಾದ್ , ಏ ೨: ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಪುಷ್ಪ ೨ ಚಿತ್ರದ ಬಿಡುಗಡೆ ತಡವಾಗಲಿದೆ ಎಂದು ಹೇಳಲಾಗಿದೆ.
ಕಳೆದ ಡಿಸೆಂಬರ್ ೨೦೨೧ ರಲ್ಲಿ, ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ದೇಶಾದ್ಯಂತ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು.
ಮೂಲ ತೆಲುಗಿನಲ್ಲಿ ತಯಾರಾದ ಚಿತ್ರವು ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.ಈ ದೊಡ್ಡ ಯಶಸ್ಸಿನ ನಂತರ, ನಿರ್ಮಾಪಕರು ಚಿತ್ರದ ೨ ನೇ ಭಾಗವನ್ನು ಹೊರತರಲು ಯೋಜಿಸಿದ್ದಾರೆ. ಆದರೆ ಇದೀಗ ಅಭಿಮಾನಿಗಳಿಗೆ ನಿರಾಶಾದಾಯಕ ಸುದ್ದಿಯೊಂದು ಬಂದಿದೆ.
ಹೌದು ಬಹುನಿರೀಕ್ಷಿತ ಪುಷ್ಪ ೨ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳು ಇನ್ನು ಕೆಲ ದಿನ ಕಾಯಲೇಬೇಕಿದೆ.. ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
ದಕ್ಷಿಣದಿಂದ ಬರುತ್ತಿರುವ ವರದಿಗಳ ಪ್ರಕಾರ, ಚಿತ್ರದ ಒಂದು ಭಾಗವನ್ನು ವಿಶಾಖಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ವೇಳಾಪಟ್ಟಿ ಮುಗಿದ ನಂತರ ಇನ್ನೂ ಶೂಟಿಂಗ್ ಪುನರಾರಂಭಿಸಲಾಗಿಲ್ಲ. ನಿರ್ದೇಶಕ ಸುಕುಮಾರ್ ಸದ್ಯ ಆ ಶಾಟ್ ಭಾಗದಿಂದ ಪುಷ್ಪ ೨ ಚಿತ್ರದ ಟೀಸರ್ ಮೇಲೆ ಕೆಲಸ ಮಾಡುತ್ತಿದ್ದು, ಏಪ್ರಿಲ್ ನಲ್ಲಿ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಚಿತ್ರೀಕರಣಗೊಂಡಿರುವ ವಿಷಯದ ಬಗ್ಗೆ ಸುಕುಮಾರ್ ಅತೃಪ್ತರಾಗಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಮೂಲಗಳನ್ನು ಉಲ್ಲೇಖಿಸಿವೆ. ನಿರ್ದೇಶಕರು ಇಲ್ಲಿಯವರೆಗೆ ಚಿತ್ರೀಕರಣ ಮಾಡಿದ್ದನ್ನು ಹೊಸದಾಗಿ ಚಿತ್ರೀಕರಿಸಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ
ಹಿಂದಿಯಲ್ಲಿ ಚಿತ್ರದ ಜನಪ್ರಿಯತೆಯನ್ನು ಪರಿಗಣಿಸಿ, ಪುಷ್ಪಾ ೨ ಗೆ ಬಾಲಿವುಡ್ ತಾರೆಯೊಬ್ಬರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ವರದಿಗಳೂ ಇವೆ. ಚಿತ್ರದ ಶೂಟಿಂಗ್‌ನಲ್ಲಿ ಸುಮಾರು ಮೂರು ತಿಂಗಳ ಗ್ಯಾಪ್ ಇರಬಹುದೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ವರ್ಷ ಚಿತ್ರ ಬಿಡುಗಡೆಯಾಗುವುದು ಸಂದೇಹ ಎನ್ನಲಾಗಿದೆ.