ತಡರಾತ್ರಿ ಮಳೆ ಅವಾಂತರ ತುಂಬಿ ಹರಿದ ಹಳ್ಳಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.02: ಜಿಲ್ಲೆಯಲ್ಲಿ‌ ತಡರಾತ್ರಿ ಸುರಿದ ಭಾರಿ ಮಳೆಯಿಂದ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿವೆ.
ತಾಲೂಕಿನ ಕೊಳಗಲ್ಲು ಗ್ರಾಮದ ಹಳ್ಳದಲ್ಲಿ ಜನರ ದುಸ್ಸಾಹಾಸ ಮಾಡಿ,  ಕುರಗೋಡು, ಯರಂಗಳ್ಳಿ . ಬಾದನಹಟ್ಟಿ ಭಾಗದ ಜನತೆ ಬಳ್ಳಾರಿ ಕಡೆ ಬರುತ್ತಿರುವ ದೃಶ್ಯ ಕಂಡು ಬಂತು.
ಉಕ್ಕಿ ಹರಿಯುತ್ತಿರುವ ಹಳ್ಳದ ಪ್ರವಾಹ ಲೆಕ್ಕಸಿದೇ ಬೈಕ್, ಆಟೋ, ಟಂಟಂ, ಟ್ಯಾಕ್ಟರ್. ಕಾರುಗಳ ಮೂಲಕ ಜನರು ದಾಟುತ್ತಿದ್ದರು.
ಕೆಲವಡೆ  ಹಳ್ಳ ದಾಟಲು ವಿದ್ಯಾರ್ಥಿಗಳು, ರೈತರು. ಜನರು ಪರದಾಡುತ್ತಿದ್ದರು.
ಇದೇ ರೀತಿ, ನಗರದ ಗೊಜ್ಜಲ ಹಳ್ಳ, ಗಂಗಮ್ಮನಹಳ್ಳ ಸಹ ತಮಬಿ ಹರಿಯುತ್ತಿವೆ. ನಗರದ ತಗ್ಗು ಪ್ರದೇಶಗಳು ಎಂದಿನಂತೆ ನೀರಿನಿಂದ ಆವೃತ್ತಗೊಂಡಿವೆ.

Attachments area