ತಡಕಲ ರಸ್ತೆ ಕಾಮಗಾರಿಗೆ ಶಾಸಕ ಗುತ್ತೇದಾರ ಚಾಲನೆ

ಆಳಂದ:ಜೂ.10: ತಾಲೂಕಿನ ತಡಕಲ ಗ್ರಾಮದ ಮುಖ್ಯ ರಸ್ತೆಯಿಂದ ಬಿ ಆರ್ ಅಂಬೇಡ್ಕರ್ ವೃತ್ತದವರೆಗಿನ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.

ಬುಧುವಾರ ತಡಕಲನಲ್ಲಿ 1.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಗ್ರಾಮದವರೆಗಿನ ರಸ್ತೆ ಸುಧಾರಿಸಬೇಕು ಎನ್ನುವುದು ನನ್ನ ಬಹುದಿನದ ಕನಸು ಅದರಂತೆ ಇಂದು ಕಾಮಗಾರಿಗೆ ಚಾಲನೆ ನೀಡುತ್ತಿದ್ದೇನೆ ಎಂದರು.

ರಸ್ತೆಯು ಎರಡು ಬದಿಯಲ್ಲಿ ಒಳಚರಂಡಿ ಹೊಂದಲಿದ್ದು ಮಧ್ಯದಲ್ಲಿ ಡಿವೈಡರ್ ಇರಲಿದೆ ಜೊತೆಗೆ ಮುಖ್ಯ ರಸ್ತೆಯು ಬೀದಿ ದೀಪಗಳಿಂದ ಕಂಗೊಳಿಸಲಿದೆ. ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆಲವು ಗ್ರಾಮಗಳಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ಧಮಲ್ಲ ಶಿವಾಚಾರ್ಯರು, ಶಿವಪುತ್ರಪ್ಪ ಬೆಳ್ಳೆ, ಶ್ರೀನಿವಾಸ ಗುತ್ತೇದಾರ, ಈರಣ್ಣ ಚಿಮ್ಮನ, ತಿಪ್ಪಯ್ಯ ಗುತ್ತೇದಾರ, ಮಲ್ಲಿನಾಥ ಮಾನೋಳಿ, ವನಿತೇಶ ಗುತ್ತೇದಾರ, ದಸ್ತಗೀರ್, ಅಧಿಕಾರಿಗಳಾದ ಈರಣ್ಣ ಕಾರಭಾರಿ, ಅರುಣಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.