ತಡಕಲ್ ವೈದ್ಯ ದಂಪತಿಯ ಸೇವೆ ಅನನ್ಯ : ಪಿಸ್ತಿ

ಕಲಬುರಗಿ: ನ.10:ಸತಿ-ಪತಿಗಳೊಂದಾದ ಭಕ್ತಿ ಹಿತವಾಗಪ್ಪುವುದು ಶಿವಂಗೆ ಎಂಬ ಮಾತಿನಂತೆ ಡಾ.ಶ್ರೀಗೌರಿ ಡಾ.ವಿಶ್ವರಾಜ ಬಿ.ತಡಕಲ್ ವೈದ್ಯ ದಂಪತಿ ತಡಕಲ್ ಸ್ಪೇಷಾಲಿಟಿ ಕ್ಲಿನಿಕ್ ವತಿಯಿಂದ ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ಶುಲ್ಕದಲ್ಲಿ ತಪಾಸಣೆ ಮಾಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಅನೇಕ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಮೂಲಕ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಪಿಸ್ತಿ ಹೇಳಿದರು.

ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ ‘ತಡಕಲ್ ಸ್ಪೇಷಾಲಿಟಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ದಂಪತಿಗೆ ಜರುಗಿದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ಮಹಾನಗರ ಪಾಲಿಕೆ ಸದಸ್ಯ ಸುನೀಲಕುಮಾರ ಬನಶೆಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣವಾಗಿದೆ ಎಂದು ವ್ಯಾಪಕವಾಗಿ ಎಲ್ಲೆಡೆ ಮಾತು ಕೇಳಿ ಬರುತ್ತಿರುವ ಪ್ರಸ್ತುತ ದಿನಗಳಲ್ಲಿ ಸೇವೆಯೇ ಗುರಿಯಾಗಿಯಾಗಿರಿಸಿಕೊಂಡು ಉತ್ತಮವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ತಡಕಲ್ ದಂಪತಿ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಿತೀಂದ್ರನಾಥ ಸುಗೂರ್, ಜೆಡಿಎಸ್ ಮುಖಂಡರಾದ ಬಸವರಾಜ ತಡಕಲ್, ದೇವೆಗೌಡ ತೆಲ್ಲೂರ್, ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲುರ, ದೇವೇಂದ್ರಪ್ಪ ಗಣಮುಖಿ, ವೀರೇಶ ಬೋಳಶೆಟ್ಟಿ ನರೋಣಾ, ಮಹಾಂತಪ್ಪ ಬದ್ದೋಲಿ, ಅಮೃತಪ್ಪ ಮುದ್ದಡಗಿ, ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ, ಮಲ್ಲಿಕಾರ್ಜುನ ಸೊಲ್ಲಾಪುರ, ಅಂಬಾರಾಯ ಬಿರಾದಾರ ಬಾಳಿ, ಅನೀಲ ಪಾಟೀಲ ನಂದೂರ, ಚನ್ನವೀರ ಹುಲಿ ಪಾಟೀಲ, ಬಸವರಾಜ ದುರ್ಗದ್, ಬಸವರಾಜ ನಿರ್ಣಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.