ತಡಕಲ್ ರೈತ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಮಾನ್ವಿ.ಏ.೧೯-ತಾಲೂಕಿನ ತಡಕಲ್ ಗ್ರಾಮದಲ್ಲಿ ಸುಮಾರು ೨೭ ಹಿಂದೆ ಕಾನೂನುಬಾಹಿರವಾಗಿ ರೈತರ ಮೇಲೆ ಪ್ರಕರಣ ದಾಖಲಿಸಿರುವ ಆಗಿನ ಸಿಪಿಐ ಕಾಶಿನಾಥ ಅಡಿ, ತಹಸೀಲ್ದಾರ ಅವಿನಾಶ ಘಾಳಿ ಅವರಿಗೆ ೩ ವರ್ಷ ಜೈಲು, ೨೫ ಸಾವಿರ ದಂಡ ಇದು ತಡಕಲ್ ರೈತರ ಜಯವಾಗಿದೆ ಎಂದು ಕಾಡ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಹೇಳಿದರು.
ರೈತರು ಈ ದೇಶದ ಮಾಲೀಕರಾಗಿದ್ದು ರೈತರಿಗೆ ಯಾವುದೇ ಜಾತಿ, ಭೇದ, ಭಾವ ಇಲ್ಲ ರೈತರ ಭಾವನೆಗೆ ತಕ್ಕಂತೆ ಕೆಲಸ ಮಾಡುವುದರ ಜೊತೆಗೆ ಅವರ ಧ್ವನಿಯಾಗಿಬೇಕು, ನಂಜುಂಡಪ್ಪನವರ ಆಶಯದಂತೆ ರೈತ ಚಳವಳಿಗಳು ಆಗಬೇಕಾಗಿದೆ ರೈತರು ದೇಶಕ್ಕೆ ಅನ್ನ ಕೊಡುವವರು ಎಂದ ಅವರು ಇತ್ತೀಚಿನ ದಿನಗಳಲ್ಲಿ ರೈತ ಸಂಘಗಳಲ್ಲಿ ಪಂಗಡಗಳ ಸೃಷ್ಟಿಸಿ ಇಬ್ಬಾಗವಾಗುತ್ತಿರುವುದು ಕಳವಳಿಕಾರಿಯಾಗಿದೆ ಎಂದು ತಿಳಿಸಿದರು.
ನಂತರ ಕರ್ನಾಟಕ ರಾಜ್ಯ ಕೃಷಿ ಬೆಂಬಲ ಬೆಲೆ ಆಯೋಗ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಮಾತನಾಡಿ ತಡಕಲ್ ಘಟನೆಯು ಸುಮಾರು ೨೭ ವರ್ಷಗಳ ಹಿಂದೆ ಅಧಿಕಾರಿಗಳು, ಅಧಿಕಾರ ವ್ಯಾಪ್ತಿ ಮೀರಿ ರೈತರಿಗೆ ಉದ್ದೇಶಪೂರ್ವಕವಾಗಿ ಅಹಿತಕರ ಘಟನೆಗೆ ಕಾರಣರಾದ ಆಗಿನ ತಹಸೀಲ್ದಾರ ಮತ್ತು ಸಿಪಿಐ ೩ ವರ್ಷ ಜೈಲಿಗೆ ಹಾಕಿ, ೨೫ ಸಾವಿರ ದಂಡ ಇದು ರೈತರಿಗೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.
ನಂತರ ಬಸನಗೌಡ ಹರಿವಿ, ಶಂಕರಗೌಡ ಹರಿವಿ, ಮುದುಕಪ್ಪಗೌಡ, ರಾಮರಡ್ಡಿ ವೆಂಕನಗೌಡ ತಡಕಲ್, ಶಿವಯ್ಯ ಸ್ವಾಮಿ ತಡಕಲ್, ಡಾ. ಶರಣಪ್ಪ ಬಲ್ಲಟಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಯಾನಗೌಡ ತಡಕಲ್, ಮಲ್ಲನಗೌಡ ತಡಕಲ್, ಅಯ್ಯನಗೌಡ ತಡಕಲ್, ಭರಮರೆಡ್ಡೆಪ್ಪ ತಡಕಲ್, ಡಾ.ಕೃಷ್ಣರೆಡ್ಡಿ, ಚನ್ನಪ್ಪ ಸಜ್ಜನ ತಡಕಲ್, ಅಮರೇಗೌಡ ವಟಗಲ್, ಶರಣೇಗೌಡ ಗೊರೆಬಾಳ, ಚನ್ನಬಸವಣ್ಣ ಕಪ್ಪಗಲ್, ಗಿರಿಗೌಡ,ಅಮರಣ್ಣ ನಂದಿಹಾಳ ಎಸ್.ಆರ್ ಪಾಟೀಲ್, ಅಮೀರ್ ಪಾಷ ದಿದ್ದಿಗಿ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಇತರರು ಉಪಸ್ಥಿತರಿದ್ದರು.