ಕಲಬುರಗಿ,ಜೂ.13-ಕಮಲಾಪುರ ತಾಲೂಕಿನ ನಾಗೂರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ತಡಕಲ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. 110 ಜನ ಮಹಿಳೆಯರು, 40 ಜನ ಪುರುಷರು ಸೇರಿ ಒಟ್ಟು 150 ಜನ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಆರೋಗ್ಯ ಅಮೃತ ಅಭಿಯಾನದಡಿ
ಕಾರ್ಮಿಕರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು. ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಬಿಎಫ್‍ಟಿ ಶಿರಾಜ, ಕಾಯಕ ಮಿತ್ರರಾದ ಅಂಬಿಕಾ, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ರಾಜಕುಮಾರ, ಸುಭಾಷ ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು, ಅಧಿಕಾರಿಗಳು, ತಾಲೂಕ ಸಂಯೋಜಕರಾದ ಉಮೇಶ್ ಜಾಧವ, ಹೆಲ್ತ್ ಇನ್ಸ್ಪೆಕ್ಟರ್ ಜೇಮ್ಸ್, ಕಮ್ಯೂಟಿ ಹೆಲ್ತ್ ಆಫೀಸರ ಬಸಮ್ಮ, ಸ್ವಯಂಸೇವಕರಾದ ರತ್ನಮ್ಮ ಮತ್ತು ಆಶಾ ಕಾರ್ಯಕರ್ತರಾದ ಸಂಗಮ್ಮ, ಅಕ್ಕಮ್ಮ. ಸಿದ್ದಮ್ಮ ಹಾಜರಿದ್ದರು.