ತಟ್ಟೆ ಹಿಡಿದು ಪ್ರತಿಭಟನೆ

ಶಿಗ್ಗಾವಿ, ಡಿ 27- ಗ್ರಾಮ ಪಂಚಾಯತ ಚುನಾವಣಾ ಕಾರ್ಯ ನಿಮಿತ್ಯ ಬಂದ ಸಿಬ್ಬಂದಿಗಳಿಗೆ ಊಟ ಮತ್ತು ತಿಂಡಿ ವ್ಯವಸ್ಥೆ ಕಲ್ಪಿಸಿಲ್ಲವೆಂದು ಆಗ್ರಹಿಸಿ ಚುನಾವಣಾ ಸಿಬ್ಬಂದಿ ತಟ್ಟೆ ಹಿಡಿದು ಪ್ರತಿಭಟನೆ ಮಾಡಿದ ಘಟನೆ ಪಟ್ಟಣದ ಜೆಎಮ್‍ಜಿ ಶಾಲೆಯ ಆವರಣಲ್ಲಿ ಶನಿವಾರ ಜರುಗಿದೆ.
ಶಿಗ್ಗಾವಿ, ಬ್ಯಾಡಗಿ, ಸವಣೂರ ಮತ್ತು ಹಾನಗಲ್ ತಾಲೂಕಿನ 105 ಗ್ರಾಮ ಪಂಚಾಯತಿಗಳಲ್ಲಿ ರವಿವಾರ ಮತದಾನ ಜರೂಗಲಿದ್ದು ಈ ಹಿನ್ನಲೆಯಲ್ಲಿ ಚುನಾವಣಾ ಮತಗಟ್ಟೆಗೆ ಮತಪೇಟ್ಟಿಗೆ ಒಯ್ಯಲು ಸೇರಿದಂತೆ ವಿವಿದ ಚುನಾವಣಾ ಕಾರ್ಯಗಳಿಗೆ ಸೇರಿದಂತೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು, ಆದರೆ ಅವರಿಗೆ ಇಲ್ಲಿ ಊಟ, ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತದ ವಿರುದ್ದ ಆಕ್ರೋಷ ವ್ಯಕ್ತ ಪಡಿಸಿದರು.
ಈ ವೇಳೆಯಲ್ಲಿ ಸಿಬ್ಬಂದಿಗಳನ್ನು ಮನವೋಲಿಸುವಲ್ಲಿ ಪೊಲೀಸ್ ಅಧಿಕಾರಿಗಳು ಹರ ಸಾಹಸ ಪಟ್ಟರು ನಂತರ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ ಪ್ರಕಾಶ ಕುದರಿ ವ್ಯವಸ್ಥೆಯ ಬಗ್ಗೆ ತಪ್ಪೊಪ್ಪಿಕೊಂಡು ಹೊರಗಡೆಯಿಂದ ಊಟವನ್ನು ತರಿಸಿ ಕೊಡಲಾಗುವದು ಎಂದು ಸಮಾದಾನ ಪಡಿಸಿದ ಘಟನೆ ಜೆಎಮ್‍ಜಿ ಶಾಲೆಯ ಆವರಣಲ್ಲಿ ಜರುಗಿದೆ.