ತಗ್ಗು ದಿನ್ನಿಗಳಾದ ರಸ್ತೆ

????????????????????????????????????

ಸಿರುಗುಪ್ಪ ಮೇ 29 : ತಾಲೂಕಿನ ಗಡಿಭಾಗದ ಗ್ರಾಮಗಳಾದ ಉತ್ತನೂರನಿಂದ ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತೀವ್ರ ಹದಗೆಟ್ಟು ತಗ್ಗ ದಿನ್ನೆಗಳಾಗಿ ಹಾಳಾಗಿದ್ದು ರಸ್ತೆಯ ಅಕ್ಕಪಕ್ಕದಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಬೇಲಿಗಳೇ ಆವರಿಸಿ ರಸ್ತೆಯು ಕಿರುದಾಗಿದೆ, ಮಳೆ ಬಂದರೇ ಸಾಕು ರಸ್ತೆಯ ಮೇಲೆ ಮಿನಿ ಕೆರೆಗಳ ಹೊಂಡಗಳಾಗಿ ಸೃಷ್ಟಿಯಾಗುತ್ತವೆ, ಬೈಕು, ಆಟೋ ವಾಹನಗಳ ಸಂಚಾರಕ್ಕೆ ಅಪಾಯದ ಹಾದಿಯಾಗಿದೆ.
ಕೂರಿಗನೂರಿನಿಂದ ಮಾಟಸೂಗೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡಾಂಬರು ಕಿತ್ತುಹೋಗಿದ್ದು ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಿ ತೀವ್ರಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಿ ಡಾಂಬರು ಕಿತ್ತುಹೋಗಿರುವ ರಸ್ತೆಗೆ ತೇಪೆಹಾಕುವ ಕೆಲಸವಾದರೂ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.