ತಗ್ಗಿದ ಸೋಂಕು-ಏರಿದ ಚೇತರಿಕೆ

ನವದೆಹಲಿ, ಜೂ,೪-ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿದ್ದು ಜೊತೆಗೆ ಚೇತರಿಕೆ ಪ್ರಮಾಣ ಹೆಚ್ಚುತ್ತಿದೆ.
ನಿನ್ನೆ ದಾಖಲಾಗಿತ್ತು ಸೋಂಕು ಪ್ರಕರಣಗಳ ಸಂಖ್ಯೆ ಇಂದು ಕೂಡ ಸೋಂಕು ದಾಖಲಾಗಿದೆ.
ಇಂದು ದೃಢಪಟ್ಟಿರುವ ಸೋಂಕು ಸಂಖ್ಯೆ ಪೈಕಿ ಕರ್ನಾಟಕ ಮಹಾರಾಷ್ಟ್ರ ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕವಾಗಿದೆ ಇನ್ನುಳಿದಂತೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದೆ
ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧,೩೨,೩೬೪ ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೨,೭೧೩ ಮಂದಿ ಸಾವನ್ನಪ್ಪಿದ್ದಾರೆ.,ಜೊತೆಗೆ ಇದೇ ಅವಧಿಯಲ್ಲಿ ೨,೦೭,೦೭೧ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ಇಂದು ಬೆಳಗ್ಗೆ ಎಂಟು ಗಂಟೆಗೆ ತನಕ ದಾಖಲಾಗಿರುವ ಹೊಸ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯತನಕ ಒಟ್ಟಾರೆ ಸೋಂಕಿನ ಸಂಖ್ಯೆ ೨,೮೫,೭೪,೩೫೦ಕ್ಕೆ ಏರಿಕೆಯಾಗಿದೆ.ಜೊತೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ೨,೬೫,೯೭,೬೫೫ ಕ್ಕೆ ಏರಿಕೆಯಾಗಿದ್ದು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೩,೪೦,೭೦೨ ಮಂದಿಗೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ಕುಸಿತ:
ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಸೋಂಕು ಸಂಖ್ಯೆಗಿಂತ ಚೇತರಿಕೆ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ರಿಯ ಪ್ರಬಂಧಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.
ಸದ್ಯ ದೇಶದಲ್ಲಿ ೧೬,೩೫,೯೯೩ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮೇ ತಿಂಗಳ ಮಧ್ಯಭಾಗದ ಅವಧಿಯಲ್ಲಿ ದೇಶದಲ್ಲಿ ೩೭ ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದವು ಇದೀಗ ಈ ಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆ ಕಡಿಮೆಯಾಗಿದೆ.

೨೨.೪೧ ಕೋಟಿಗೆ ಲಸಿಕೆ:
ದೇಶದಲ್ಲಿ ದಿನನಿತ್ಯ ಸೀಮಿತ ಅವಧಿಯಲ್ಲಿ ಲಸಿಕೆ ಹಾಕಲಾಗುತ್ತಿದ್ದು ಇದುವರೆಗೂ ೨೨ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.
ನಿನ್ನೆ ಸಂಜೆ ತನಕ ೨೨,೪೧,೦೯,೪೪೮ ಮಂದಿಗೆ ಲಸಿಕೆ ಹಾಕಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ

೩೫.೭೪ ಕೋಟಿಗೆ ಪರೀಕ್ಷೆ:
ದೇಶದಲ್ಲಿ ೩೫ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ
ನಿನ್ನೆ ಒಂದೇ ದಿನ ೨೦,೭೫,೪೨೮ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಇದರೊಂದಿಗೆ ದೇಶದಲ್ಲಿ ಇಲ್ಲಿಯತನಕ ೩೫,೭೪,೩೩,೮೪೬ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಕಳೆದ ಹಲವು ದಿನಗಳಿಂದ ದೇಶದಲ್ಲಿ ಸರಾಸರಿ ೨೦ ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ ಇದರಿಂದ ದೇಶದಲ್ಲಿ ಪ್ರಮಾಣವನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ