ತಗ್ಗಿದ ತುಂಗಭದ್ರಾ ಪ್ರವಾಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ತಗ್ಗಿದ ತುಂಗಭದ್ರಾ ಪ್ರವಾಹ. ಒಂದು ಲಕ್ಷಕ್ಕಿಂತ ಕಡಿಮೆಯಾದ ಹೊರ ಹರಿವು.
 ಹೊರ ಬಿದ್ದ ಕಂಪ್ಲಿ ಸೇತುವೆ
ಕಳೆದೊಂದು ವಾರದಿಂದ ತುಂಗಭದ್ರ ನದಿ‌ನೀರಿನ ಪ್ರವಾಹದಿಂದ ಮುಳುಗಿದ್ದ ಕಂಪ್ಲಿ ಸೇತುವೆ ಇಂದು ಹೊರ ಬಿದ್ದಿದೆ. ಸೇತುವೆ ಮೇಲೆ
ಕಸ ಗಿಡ ಘಂಟೆಗಳ ರಾಶಿ ತುಂಬಿಕೊಂಡಿದೆ. ಸ್ಥಳೀಯ ಪರಸಭೆ ಅಧಿಕಾರಿಗಳು ಸೇರಿದಂತೆ ಸ್ಥಳೀಯರಿಂದ ಜೆಸಿಬಿ‌ ಮೂಲಕ ತ್ಯಾಜ್ಯ ಹೊರಹಾಕುವ ಕಾರಗಯ ನಡೆದಿತ್ತು.
105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 100 ಟಿಎಂಸಿ‌‌ ನೀರು ಸಂಗ್ರಹವಾಗಿದೆ.  80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್  ಒಳಹರಿವು ಇದ್ದು ಬಂದಷ್ಟೇ ನೀರನ್ನು ಹೊರಗೆ ಬಿಡಲಾಗುತ್ತಿದೆ.

Attachments area