ತಗಡೂರ್‌ಗೆ ರಾಜೇಂದ್ರ ಶ್ರೀ ಪ್ರಶಸ್ತಿ

ಮೈಸೂರು, ಸೆ. ೧೬- ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ೧೦೭ನೇ ಜಯಂತಿ ಅಂಗವಾಗಿ ಮೈಸೂರು ಶರಣ ಮಂಡಳಿ ನೀಡುವ ರಾಜೇಂದ್ರ ಶ್ರೀಗಳ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಕೆ.ಯು.ಡಬ್ಲ್ಯು.ಜೆ. ಅಧ್ಯಕ್ಷ ಶಿವಾನಂದ ತಗಡೂರು ಭಾಜನರಾಗಿದ್ದಾರೆ.
ನಾಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಮುಗೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.