ತಕ್ಷಣ ಸಹಾಯಧನ ಬಿಡುಗಡೆಗೆ ಆಗ್ರಹ


ಧಾರವಾಡ ಜೂ.3–ಕೋವಿಡ್-19 ಮೊದಲನೆ ಅಲೆಗೆ ಸಂಬಂಧಿಸಿದಂತೆ ಸರ್ಕಾರದಿಂದ ರೂಪಾಯಿ 5000/- ಐದು ಸಾವಿರಗಳನ್ನು ಚರ್ಮಗಾರಿಕೆಯಲ್ಲಿ ತೊಡಗಿದ ಫಲಾನುಭವಿಗಳಿಗೆ ಸಹಾಯಧನ ಘೋಷಣೆ ಮಾಡಿರುವಂತೆ ಕೇವಲ 30% ಫಲಾನುಭವಿಗಳಿಗೆ ಸೌಲಭ್ಯದೊರಕಿದ್ದು, ಉಳಿದ 70% ಫಲಾನುಭವಿಗಳಿಗೆ ಈ ಸೌಲಭ್ಯ ದೊರಕದೆ ವಂಚಿತರಾಗಿದ್ದಾರೆ.
ಆದ್ದರಿಂದ ಕೋವಿಡ್-19 ಎರಡನೆಯ ಅಲೆ ಬಂದಿದ್ದು ಸರ್ಕಾರದ ನಿಯಮದಂತೆ ಚರ್ಮಗಾರಿಕೆಯಲ್ಲಿ ತೊಡಗಿರುವ ಫಲಾನುಭವಿಗಳು ತಮ್ಮ ಪಾದರಕ್ಷಗಳ ಅಂಗಡಿಯನ್ನು ಬಂದು ಮಾಡಲಾಗಿದೆ.
ಈಗಾಗಲೇ ಸರ್ಕಾರದಿಂದ ಘೋಷಣೆಗೊಂಡಿರುವಂತೆ ಫಲಾನುಭವಿಗಳ ಖಾತೆಗೆ ರೂ. 2000/- ಎರಡು ಸಾವಿರಗಳನ್ನು ಮಂಜೂರು ಮಾಡಲು ಫಲಾನುಭವಿಗಳಿಂದ ಕಾಗದ ಪತ್ರಗಳನ್ನು ಕೇಳಿದ್ದು, ಇರುತ್ತದೆ. ಅದರಂತೆ ಧಾರವಾಡದಲ್ಲಿ ಝರಾಕ್ಸ ಹಾಗೂ ಡಿಟಿಪಿ ಸೆಂಟರ್ ಯಾವುದೇ ಅಂಗಡಿಗಳು ಅಭ್ಯವಿರದ ಕಾರಣ ಧಾರವಾಡದ ಫಲಾನುಭವಿಗಳು ಈಗಾಗಲೇ ಕಾಗದ ಪತ್ರಗಳನ್ನು ಸಮಾಜ ಕಲ್ಯಾಣ ಇಲಾಖೆ, ಧಾರವಾಡ ಹಾಗೂ ಡಾ|| ಬಾಬು ಜಗಜೀವನರಾಂ ಚರ್ಮಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಹುಬ್ಬಳ್ಳಿ. ಸಂಯೋಜಕ ಇವರಿಗೆ ನೀಡಿದ್ದು ಇರುತ್ತದೆ. ಪದೇ ಪದೇ ಕಾಗದ ಪತ್ರಗಳನ್ನು ನಿರೀಕ್ಷಿಸಸದೇ ಈಗಾಗಲೇ ನೀಡಿದ ಕಾಗದ ಪತ್ರಗಳನ್ನು ಪರಿಗಣಿಸಿ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಘೋಷಣೆ ಮಾಡಿದಂತೆ ಕೂಡಲೇ ಸಹಾಯಧನ ಮಂಜೂರು ಮಾಡುವಂತೆ ನಮ್ಮ ಸಂಘದಿಂದ ಶ್ರೀ ಭಾರತ ರತ್ನ ಡಾ|| ಬಾಬಾ ಸಾಹೇಬ ಅಂಬೇಡ್ಕರ ಲಿಡಕರ ಹಿತಾ ಅಭಿವೃದ್ಧಿ ಸಂಘದ ವತಿಯಿಂದ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ ಭಂಡಾರಿ,ಹನುಮಂತ ಮೊರಬ,ನಾರಾಯಣ ಮಾದರ,ಸುರೇಶ ನವಲೂರ,ಶಬ್ಬೀರ ಅತ್ತಾರ,ರಮೇಶ ಅರಳಿಕಟ್ಟಿ,ಪರಶುರಾಮ ಬೆಳಗಾಂ,ಸಿದ್ದಾಪ್ಪ ಕಲಘಟಗಿ,ಉಪಸ್ಥಿತರಿದ್ದರು.