ತಕ್ಕಪಾಠ: ಶ್ರೀಕುಮಾರ ಮಹಾರಾಜ ಪ್ರತಿಕ್ರಿಯೆ


ಬಾದಾಮಿ,ಮೇ.14: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ ದಲಿತ ಸಮುದಾಯಗಳನ್ನು ಒಡೆದು ಒಳಮೀಸಲಾತಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದ ಬಿಜೆಪಿ ಸರಕಾರಕ್ಕೆ ಬಂಜಾರ, ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯ ತಕ್ಕ ಪಾಠ ಕಲಿಸಿದೆ ಎಂದು ಬಾಗಲಕೋಟೆಯ ನೀಲಾನಗರದ ಬಂಜಾರಾ ಶಕ್ತಿಪೀಠದ ಸ್ವಾಮೀಜಿ ಶ್ರೀ ಕುಮಾರ ಮಹಾರಾಜರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಳ ಸಮುದಾಯಗಳನ್ನು ಒಡೆದು ಬೀದಿಗೆ ತಂದಿದ್ದ ಬಿಜೆಪಿ ನಾಯಕರ ಅಹಂಕಾರ ಉಡಗಿಹೋಗಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ತೀವ್ರ ಮುಖಭಂಗವಾಗಿದೆ. ಜಾತಿಗಳನ್ನು ಒಡೆಯುವ ಎಲ್ಲಾ ಸರಕಾರಕ್ಕೆ ಇದು ಪಾಠವಾಗಿದೆ.