ತಂಬ್ರಹಳ್ಳಿ :3.67ಕೋಟಿ ರೂ. ಬಾಲಕಿಯರ ವಸತಿ ನಿಲಯ ಉದ್ಘಾಟನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:.ಮಾ.07: ತಾಲೂಕಿನ ತಂಬ್ರಹಳ್ಳಿಯಲ್ಲಿ 3.67 ಕೋಟಿ ರೂಗಳಲ್ಲಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು   ಶಾಸಕ ಎಸ್ ಭೀಮ ನಾಯ್ಕ್ ಸೋಮವಾರ  ಉದ್ಘಾಟಿಸಿದರು
 ನಂತರ ಮಾತನಾಡಿ ತಂಬ್ರಹಳ್ಳಿ ಹೋಬಳಿ ಭಾಗಕ್ಕೆ 50 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪದವಿ ಕಾಲೇಜ್ ಹಾಗೂ ಎರಡನೆಯ ಹಂತದ ಏತಾ ನೀರಾವರಿ ಯೋಜನೆಯನ್ನು . ಕೈಗೆತ್ತಿಕೊಳ್ಳಲಾಗುವುದು. ಈಗಿರುವ ಸರ್ಕಾರ  40 ಪರ್ಸೆಂಟ್ ಕಮಿಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಇದುವರೆಗೂ ಯಾವುದೇ ಅನುದಾನ ನೀಡುತ್ತಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ರಮೇಶ್ ವಿ. ಪ್ರಾಸ್ತಾವಿವಾಗಿ ಮಾತನಾಡಿದರು ಇದಕ್ಕೂ ಮುನ್ನ ಆಸ್ಪತ್ರೆ ಆವರಣದಲ್ಲಿ 98 ಲಕ್ಷರೂ ಅನುದಾನಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ . 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ. ಉದ್ಘಾಟನೆಗೆ ನಿಗದಿಯಾಗಿತ್ತು. ಆದರೆ ವಿದ್ಯುತ್ ಸೇರಿದಂತೆ ಮೂಲ ಭೂತ ಸೌಕರ್ಯ ಮಾಡಿಲ್ಲ ಆದ್ದರಿಂದ ಅದನ್ನು  ಉದ್ಘಾಟನೆ ಮಾಡಬಾರದು ಎಂದು ಅಲ್ಲಿಯ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ  ಉದ್ಘಾಟನೆ ರದ್ದು ಮಾಡಲಾಯಿತು.
ಈ ಸಂದರ್ಭದಲ್ಲಿ  ಗುರು ಬಸವರಾಜ್ ಹುಡೇದ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ , ನಿವೃತ್ತ ಇಒ  ವೆಂಕೋಬಪ್ಪ, ಸುರೇಶ್ ಪಟ್ಟಣಶೆಟ್ಟಿ, ಮುತ್ಕೂರು ಲಚ್ಚಪ್ಪ, ಬಿ. ದೇವಿಪ್ರಸಾದ. ತಾಪಂ ಮಾಜಿ ಸದಸ್ಯ ಪಿ ಕೊಟ್ರೇಶ್, ಗ್ರಾಪಂ ಉಪಾಧ್ಯಕ್ಷ ಬಸವಲಿಂಗನಗೌಡ, ಸದಸ್ಯರಾದ ದೊಡ್ಡಬಸಪ್ಪ, ಸಂಡೂರು ಹುಸೇನಸಾಬ್.ಕಸಾಪ ಅಧ್ಯಕ್ಷ ಎಸ್ ವಿ ಪಾಟೀಲ, ಮಂಜುನಾಥ ಪಾಟೀಲ ಗೌರಜ್ಜನವರ ಗಿರೀಶ್, ಬಾಳೆಕಾಯಿ ಚಿದಾನಂದಪ್ಪ, ಪ್ರಾಂಶುಪಾಲ ಜಿಂಕೇರಿ ಸತೀಶ್ ಹಿಂದುಳಿದ ವರ್ಗಗಳ ಇಲಾಖೆಯ ಮಾಹಂತೇಶ್, ಕವಿತಾ ಹಾಗೂ ಸಿಬ್ಬಂದಿ ಇತರರು ಪಾಲ್ಗೊಂಡಿದ್ದರು.