ತಂಬ್ರಹಳ್ಳಿ :ಸ್ವಯಂ ಪ್ರೇರಿತ ರಕ್ತದಾನ ಶಿಬಿರ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.21- ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ, ಆರೋಗ್ಯ ಇಲಾಖೆ  ಸಹಯೋಗದಲ್ಲಿ ಮಂಗಳವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಜಿ ಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಉದ್ಘಾಟಿಸಿ ಮಾತನಾಡಿ ಯುವಕರು ದುಶ್ಚಟಗಳಿಂದ ದೂರ ಇದ್ದು ಇನ್ನೊಬ್ಬರ ಜೀವ ಕಾಪಾಡುವಂತಹ ಮಾನವೀಯತೆ ಬೆಳೆಸಿಕೊಳ್ಳಬೇಕು. ಸ್ವಯಂಪ್ರೇರಿತ ರಕ್ತದಾನದಿಂದ ತೊಂದರೆ ಇರುವ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗೌರಜ್ಜನವರ್ ಗಿರೀಶ್, ಪಟ್ಟಣಶೆಟ್ಟಿ ಸುರೇಶ, ಮಂಜುನಾಥ್ ಪಾಟೀಲ್, ದೇವಿಪ್ರಸಾದ್, ಗ್ರಾಮ ಪಂಚಾಯತಿ ಸದಸ್ಯರು, ಊರಿನ ಹಿರಿಯರು ಇತರರಿದ್ದರು.

Attachments area