ತಂಬ್ರಹಳ್ಳಿ :ವಿಜೃಂಭಣೆಯಿಂದ ಜರುಗಿದ ಶ್ರೀ ಬಂಡೇರಂಗನಾಥೇಶ್ವರ ಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಮಾ.26 ತಾಲ್ಲೂಕಿನ ತಂಬ್ರಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಬಂಡೇರಂಗನಾಥೇಶ್ವರ ಸ್ವಾಮಿಯ ರಥೋತ್ಸವವು ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷ ಪಾಲ್ಗುಣ ಮಾಸದ ಹೋಳಿ ಹುಣ್ಣಿಮೆಯಂದು ಜರುಗುವ ಈ ರಥೋತ್ಸವ ಹಾಗೂ ಜಾತ್ರಾ ಮಹೋತ್ಸದ ಅಂಗವಾಗಿ ಬೆಟ್ಟದಲ್ಲಿ ಒಡಮೂಡಿದ ರಂಗನಾಥೇಶ್ವರನಿಗೆ ಕಳೆದ ಒಂದು ವಾರದಿಂದಲೇ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ.
ಬೆಳಗ್ಗಿನ ಜಾವ ಶ್ರೀಬಂಡೇ ರಂಗನಾಥೇಶ್ವರ ಹಾಗೂ ಲಕ್ಷ್ಮಿ ದೇವಿಗೆ ಪಂಚಾಭಿಷೇಕ, ರುದ್ರಾಭಿಷೇಕ, ಹಾಗೂ ಸರ್ವಾಭರಣ ಅಲಂಕಾರ ಹಾಗೂ ವಿವಿಧ ಕಡೆಗಳಿಂದ ಆಗಮಿಸಿದ ಪುರೋಹಿತರು ಪೂಜೆ ಹೋಮ ಹಾಗೂ ಹವ ನೆರವೇರಿಸಿದರು. ದೇವಸ್ಥಾನದ  ಆವರಣ ದ್ವಾರ  ಬಾಗಿಲು ಸುತ್ತಲೂ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು.
ಸಾಯಂಕಾಲ ದೇವಸ್ಥಾನ ಕಮಿಟಿಯ ಗೌರವಾಧ್ಯಕ್ಷರು ಹಾಗೂ ಸುಕ್ಷೇತ್ರ ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ರಂಗನಾಥೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಯಲ್ಲಿ ಪ್ರತಿಷ್ಠಾಪಿಸಿ ಲಾಯಿತು.ಬಳಿಕ ನಾನಾ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬೆಟ್ಟದ ಮೇಲಿಂದ ರಥ ಎಳೆಯುವ ಸ್ಥಳಕ್ಕೆ ತರಲಾಯಿತು.
ವಿವಿಧ ದೇವರ ಮೂರ್ತಿ ಗಳು ಬೃಹತ್ ಗಾತ್ರದ ಹೂವಿನ ಹಾರಗಳು ಹಾಗೂ ತಳಿರು ತೋರಣಗಳಿಂದ ಅಲಂಕೃತವಾದ ಸುಂದರವಾಗಿ ಕಂಗೊಳಿಸುವ ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇವರ ಪಟ ಹರಾಜಿನಲ್ಲಿ ತಂಬ್ರಹಳ್ಳಿಯ ಸುಣಗಾರ ಹನುಮಂತ 1ಲಕ್ಷದ 81 ಸಾವಿರ ರೂಗಳಿಗೆ  ಪಡೆದುಕೊಂಡರು.
ಈ ವೇಳೆ ಕಮಿಟಿಯ ಪದಾಧಿಕಾರಿಗಳು ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ಆಗಮಿಸಿದ್ದರು.

One attachment • Scanned by Gmail