ತಂಬ್ರಹಳ್ಳಿ :ತೋಂಟದಾರ್ಯ ಸ್ವಾಮಿ ತೇರು ಗಾಲಿ ಹೊರಕ್ಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಫೆ.26 ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ಮಹಾ ಶಿವರಾತ್ರಿಯ ದಿನದಂದು ಜರುಗುವ ಶ್ರೀ ತೋಂಟದಾರ್ಯ ಸ್ವಾಮಿಯ ರಥೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮದ ಮುಖಂಡರು ತೇರಿನ ಗಾಲಿ ಹೊರಕ್ಕೆ ಹಾಕುವ ಕಾರ್ಯಕ್ರಮ ನೆರವೇರಿಸಿದರು.
ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾಂಕೇತಿಕವಾಗಿ ಎತ್ತಿನ ಬಂಡಿಗೆ ಪೂಜೆ ಸಲ್ಲಿಸುವ ಮುಖಾಂತರ ತೇರು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದು ಗ್ರಾಮದ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹೆಚ್.ಬಿ.ನಾಗನಗೌಡ್ರು, ಉದಯ ಭಾಸ್ಕರ್ ರಾವ್, ಗೌರಜ್ಜನವರ ಬಸವರಾಜಪ್ಪ, ಬಣಕಾರ ತೋಟಪ್ಪ, ಕಡ್ಡಿ ಚೆನ್ನಬಸಪ್ಪ, ಬಸರಕೋಡು ಲಕ್ಷ್ಮಣ, ಬಣಕಾರ ಕೊಟ್ರೇಶ್, ಹೆಚ್.ಬಿ.ಗಂಗಾಧರಗೌಡ, ಕಿನ್ನಾಳ ಸುರೇಶ್, ಟಿಎಂ.ನಾಗಭೂಷಣಯ್ಯ, ಬಾಳೆಕಾಯಿ ವಿರೇಶ್, ಅರ್ಚಕ ಮಹಾಬಲೇಶ್ವರಯ್ಯ ಸ್ವಾಮಿ ಇತರರು ಇದ್ದರು.