ತಂಬ್ರಹಳ್ಳಿ : ಡಿಗ್ರಿ ಕಾಲೇಜ್, ನೀರಾವರಿ ಯೋಜನೆಗೆ ಒತ್ತಾಯಿಸಿ ಆ.17ರಂದು ಪಾದಯಾತ್ರೆ


 ಸಂಜೆವಾಣಿ ವಾರ್ತೆ.
 ಹಗರಿಬೊಮ್ಮನಹಳ್ಳಿ. ಆ.06 ಡಿಗ್ರಿ ಕಾಲೇಜು, ಏತಾ ನೀರಾವರಿ 2ನೇ ಹಂತದ ಯೋಜನೆಗೆ ಒತ್ತಾಯಿಸಿ  ತಾಲೂಕಿನ ತಂಬ್ರಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಊರಿನ ಮುಖಂಡರು ಆ.17 ರಂದು ಜಿಲ್ಲಾ ಕೇಂದ್ರಕ್ಕೆ  ಪಾದಯಾತ್ರೆ ಮಾಡಲಾಗುವುದು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ತಿಳಿಸಿದ್ದಾರೆ.
  ಗ್ರಾಮದ  ದೇವಸ್ಥಾನದಲ್ಲಿ ಗುರುವಾರ ಸಾಯಂಕಾಲ  ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಹಲವಾರು ವರ್ಷಗಳ ಬೇಡಿಕೆಯಾಗಿರುವ ಡಿಗ್ರಿ ಕಾಲೇಜ್,ಎರಡನೇ ಹಂತದ ಏತ ನೀರಾವರಿ ಯೋಜನೆ  ಕಲ್ಪಿಸುವಂತೆ ಹಲವು ಬಾರಿ ಸರ್ಕಾರಕ್ಕೂ ಮನವಿ ಸಲ್ಲಿಸುತ್ತಾ ಬಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ   ಸುತ್ತಮುತ್ತ ಗ್ರಾಮದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಹಾಗೂ ಊರಿನ ಮುಖಂಡರು ಗ್ರಾಮದಿಂದ ಹೊಸಪೇಟೆಗೆ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ತಾಲೂಕು ಕೇಂದ್ರದಲ್ಲಿರುವ ಒಂದು ಡಿಗ್ರಿ ಕಾಲೇಜಿಗೆ ಈ ಭಾಗದ ವಿದ್ಯಾರ್ಥಿಗಳು ಹೋಗಲು ಅನಾನುಕೂಲವಾಗುತ್ತದೆ. ಆದ್ದರಿಂದ ಈ ಭಾಗದಲ್ಲಿ ಒಂದು ಡಿಗ್ರಿ ಕಾಲೇಜ್ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಐದು ವಾರ ನಿರಂತರ 8 ನೂರಕ್ಕೂ ಹೆಚ್ಚು  ಪತ್ರಗಳನ್ನು ಬರೆದು ಸರಕಾರಕ್ಕೆ ಗಮನ ತಂದರು ಸ್ಪಂದಿಸದೆ ಇರುವುದರಿಂದ ಈ ಒಂದು ಪಾದಯಾತ್ರೆಯ ಕೈಗೊಳ್ಳಲಾಗುತ್ತದೆ ಎಂದರು.
 ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಟ್ಟಣಶೆಟ್ಟಿ ಸುರೇಶ ಗಂಗಾಧರ್ ಗೌಡ ಶಿವಕುಮಾರ್, ಬಸವರಾಜ್, ಮೆಹಬೂಬ್ ಬಾಷಾ, ಕಟ್ಟಿ ಚೆನ್ನಪ್ಪ, ನಿವೃತ್ತ ಇಒ  ವೆಂಕೋಬಪ್ಪ, ಮಂಜುನಾಥ ಪಾಟೀಲ್, ಗಿರೀಶ, ದೊಡ್ಡ ಬಸಪ್ಪ, ದೇವಿ ಪ್ರಸಾದ್, ಎಸ್ ಡಿ ಎಮ್ ಸಿ ಮರಿಯಪ್ಪ, ಪಾಟೀಲ್ ನಿವೃತ್ತ ಶಿಕ್ಷಕ, ಅಗಡಿ ಸಿದ್ದಪ್ಪ, ಲೇಪಾಕ್ಷಿ ಇತರರಿದ್ದರು.