ತಂಬ್ರಳ್ಳಿಯಲ್ಲಿ ಪಿಯುಸಿ ವಿಜ್ಞಾನ ವಿಭಾಗ ಆರಂಭಿಸಲುವೀ.ವಿ.ಸಂಘದ ಅಧ್ಯಕ್ಷರಿಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.21:  ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕು ತಂಬ್ರಹಳ್ಳಿ ಗ್ರಾಮದಲ್ಲಿ ವೀ.ವಿ. ಸಂಘದಿಂದ ಹಾಲಿ ಇರುವ ಕಾಲೇಜಿನಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗ ಮತ್ತು ಹೊಸದಾಗಿ ಕಿಂಡರ್ ಗಾರ್ಡನ್ ಶಾಲೆಯನ್ನು ಆರಂಭಿಸಬೇಕೆಂದು ಸಂಘದ ಸದಸ್ಯರು ಗ್ರಾಮದ ಮುಖಂಡರು ಸಂಘಕ್ಕೆ ಮನವಿ ಮಾಡಿದ್ದಾರೆ.
ನಿನ್ನೆ ನಗರದಲ್ಲಿನ ಸಂಘದ ಕಚೇರಿಯಲ್ಲಿ ಅಧ್ಯಕ ಅಲ್ಲಂ ಗುರುಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ.
ಚುನಾವಣೆಯ ಸಂದಭರ್ದಲ್ಲಿ ಗ್ರಾಮಕ್ಕೆ ಬಂದಿದ್ದ ನಿಮಗೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. ನಮ್ಮ ಈ ಬೇಡಿಕೆ ಈಡೇರಿಸುವ ಭರವಶೆ ನೀಡಿದ್ದಿರಿ.
ವೀರಶೈವ ವಿದ್ಯಾವರ್ಧಕ ಸಂಘವು ಕಳೆದ 55 ವರ್ಷಗಳ ಹಿಂದೆ (1968) ಪ್ರೌಢಶಾಲೆಯನ್ನು ಮತ್ತು 26 ವರ್ಷಗಳ ಹಿಂದೆ (1997) ಪಿ.ಯು.ಸಿ. ಕಾಲೇಜನ್ನು ಗ್ರಾಮದಲ್ಲಿ ಪ್ರಾರಂಭಿಸಿ ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿಗೆ ಸಹಕಾರಿಯಾಗಿದೆ.
ಕಳೆದ 28 ವರ್ಷಗಳ ಹಿಂದೆ ಆರಂಭಿಸಿದ ಅಕ್ಕಿ ಬಸಮ್ಮ ತೋಟಪ್ಪ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಅದರಲ್ಲೂ ಬಾಲಕಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಗದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ವಿಭಾಗದ ಬೇಡಿಕೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಇಲ್ಲದೇ ವಂಚಿತರಾಗಿರುವುದರಿಂದ ದೂರದ ಬೇರೆ ಪಟ್ಟಣಗಳಿಗೆ ಹೋಗದೆ ಪಿ.ಯು.ಸಿ. ವಿಜ್ಞಾನ ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ನಮ್ಮ ಗ್ರಾಮದಲ್ಲಿ ಬಿ.ಸಿ.ಎಂ. ಇಲಾಖೆಯಿಂದ 150 ಸಂಖ್ಯೆಯುಳ್ಳ ಬಾಲಕಿರಯ ಮೆಟ್ರಿಕ್ ನಂತರದ ಸುಸಜ್ಜಿತ ಕಟ್ಟಡದ ವಿದ್ಯಾರ್ಥಿ ನಿಲಯ ಇರುತ್ತದೆ. ಆದ್ದರಿಂದ ಪ್ರಸಕ್ತ 2024-25ನೇ ಶೈಕ್ಷಣಿಕ ವರ್ಷದಿಂದ ಹಾಲಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಿ ನಮ್ಮ ಭಾಗದ ಅನೇಕ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕು.
ಅದೇರೀತಿ  ಪ್ರಸಕ್ತ ಶೈಕ್ಷಣಿಕ ಕಿಂಡರ್ ಗಾರ್ಡನ್ ಆರಂಭಿಸಿ ಸುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಶಿಕ್ಷಣ ಕೊಡಬೇಕೆಂದು ಸಂಘದ ಸದಸ್ಯರುಗಳಾದ ಅಕ್ಕಿ ತೋಟೇಶ್ , ಎಸ್‌.ಮಲ್ಲಿಕಾರ್ಜುನ ರೆಡ್ಡಿ, ಜಿ.ಬಸವರಾಜ್, ಡಾ.ಜೆ.ಎಂ.ಮಹೇಸ್ವರಯ್ಯ, ಕೊಟ್ರಪ್ಪ ಮತ್ತಿತರರು ಇದ್ದರು.