ತಂಬಿಟ್ಟು ದೀಪೋತ್ಸವ ಆಚರಣೆ

ಮಾಲೂರು.ಸೆ೨೧:ವೆಂಕಟರಾಜನಹಳ್ಳಿ ಗ್ರಾಮದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಸಕಾಲಕ್ಕೆ ಮಳೆ-ಬೆಳೆ ಹಾಗೂ ಗ್ರಾಮದ ಶಾಂತಿ ನೆಮ್ಮದಿಗಾಗಿ ಗ್ರಾಮಸ್ಥರು ಊರಹಬ್ಬ ಆಚರಣೆ ಮಾಡುವ ಮೂಲಕ ಗ್ರಾಮದೇವತೆಗಳಿಗೆ ತಂಬಿಟ್ಟು ದೀಪ ಅರ್ಪಿಸಿ ದೀಪೋತ್ಸವವನ್ನು ಆಚರಿಸಿದರು.
ತಾಲೂಕಿನ ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕಟರಾಜನಹಳ್ಳಿ ಗ್ರಾಮದಲ್ಲಿ ಊರಹಬ್ಬ ಆಚರಣೆ ಮಾಡಲಾಯಿತು. ಗ್ರಾಮದಲ್ಲಿ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ತಂಬಿಟ್ಟು ದೀಪ ತಯಾರಿಸಿ ಗ್ರಾಮ ದೇವತೆಗಳಾದ ಗಂಗಮ್ಮ, ಯಲ್ಲಮ್ಮ, ಸಪಲಂಬಾ, ಹೊನ್ನಮ್ಮ, ಚೆನ್ನಮ್ಮ, ಮೂಲದೇವರಗಳಿಗೆ ದೇವಾಲಯಗಳಿಗೆ ತೆರಳಿ ಮೂಲ ದೇವರುಗಳಿಗೆ ತಂಬಿಟ್ಟು ದೀಪ ಅರ್ಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಊರ ಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು ಗ್ರಾಮ ಹಬ್ಬಕ್ಕೆ ಶಾಸಕ ಕೆ.ವೈ.ನಂಜೇಗೌಡ ಜಿಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ, ಗ್ರಾಪಂ ಅಧ್ಯಕ್ಷೆ ಹೇಮಾಮಾಲಿನಿ ನಾರಾಯಣಸ್ವಾಮಿ, ಸದಸ್ಯರಾದ ಟಿ.ಆರ್.ಮುನಿರಾಜು, ಸುಧಾರಾಣಿ, ಸತೀಶ್, ಗ್ರಾಮದ ಮುಖಂಡರಾದ ಟಿವಿಎಸ್ ಕೃಷ್ಣಪ್ಪ, ಚಲಪತಿ, ಸತೀಶ್, ಚೌಡಪ್ಪ, ಕಿಶೋರ್, ಕಿರಣ್, ವೆಂಕಟೇಶ್ ಗೌಡ, ಅಂಜಿ, ಮಂಜುನಾಥ್, ಇನ್ನಿತರರು ಹಾಜರಿದ್ದರು.