ತಂಬಾಕು ಸೇವನೆ ಬಿಡಿ-ಆರೋಗ್ಯವಾಗಿರಿ-ಡಾ.ಹಳ್ಳಿಕೇರಿ


ಧಾರವಾಡ ಜೂ.1: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇದು ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಂಬಾಕು ಸೇವನೆಯಿಂದ ಯಾವುದೇ ಆರೋಗ್ಯಕರ ಪ್ರಯೋಜನಗಳು ಉಂಟಾಗದು. ಬದಲಿಗೆ ಕ್ಯಾನ್ಸರ್ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಅನುವುಮಾಡಿಕೊಡುವುದು ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಸಂಗತಿ. ಹಾಗಾಗಿ ತಂಬಾಕು ಸೇವನೆ ಕಡ್ಡಾಯವಾಗಿ ಬಿಡಬೇಕು ಎಂದು ಕ್ಯಾನ್ಸರ್ ಆಸ್ಪತ್ರೆ ಡಾ ಉಮೇಶ ಹಳ್ಳಿಕೇರಿ ಹೇಳಿದರು.
ಅವರು ಪದ್ಮಶ್ರೀ ಡಾ.ಆರ್.ಬಿ ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಲ, ನವನಗರ,ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ತೆಜಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರು ದೇವರ ಸಾಕ್ಷಿಯಾಗಿ ತೆಜಿಸುವೆ ಎಂದು ಪ್ರಮಾಣ ಭೋದಿಸಿದರು.
ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ ಮಧ್ಯಪಾನ ಮತ್ತು ತಂಬಾಕಿನ ವಿಷಯ ತಿಳಿದಿದ್ದರೂ ಧೂಮಪಾನ ಹಾಗೂ ತಂಬಾಕು ಸೇವನೆ ಮಾಡುತ್ತಾರೆ. ತಂಬಾಕು ಸೇವನೆಯಿಂದ ವ್ಯಕ್ತಿ ತನ್ನ ಜೀವನವನ್ನೇ ಹಾಳುಮಾಡಿಕೊಳ್ಳುವನು. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ ಸದಸ್ಯರಾದ ಡಾ.ಧೀರಜ ವೀರನಗೌಡರ, ಡಾ.ಸಾಯಿಕುಮಾರು,ಡಾ.ಪೂರ್ಣಚಂದ್ರ, ಡಾ.ಶಿವಶಂಕರ, ಡಾ.ಶಿಕಾ, ಮಂಜುನಾಥ ಹೆಗಡೆ, ವಿಶಾಲ ಕರಣಿ, ಶೀಲಾ, ಡಾ ಮಂಜುಳಾ ಹುಗ್ಗಿ ಹಾಗೂ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿ ಮತ್ತು ತಂಬಾಕು ಸೇವಕರಿಂದ ಪ್ರಮಾಣ ವಚನ ಮಾಡಿಸಲಾಯಿತು.