ತಂಬಾಕು ಸೇವನೆ ಬಗ್ಗೆ ಎಚ್ಚರ ಅತಿ ಅಗತ್ಯ- ಶಿವಪ್ಪ


ಸಂಜೆವಾಣಿ ವಾರ್ತೆ
ಸಂಡೂರು:ಜು: 8: ತೋರಣಗಲ್ಲು ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಅರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ವನ್ನು ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ನಡೆಸಲಾಯಿತು.
ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಅರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿತ್ತು,
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆ ಮಾಡಿದರೆ ದೇಹದ ಅಂಗಾಂಗಳಲ್ಲಿ ಉಂಟಾಗುವ ಹಾನಿಯ ಬಗ್ಗೆ ಮಾಹಿತಿ ನೀಡುತ್ತಾ, 13-19 ವಯಸ್ಸಿನ ಯುವಕರು ಇತರರನ್ನು ಅನುಕರಣೆ ಮಾಡಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವರು, ಸಿಗರೇಟ್ ಸೇರುವುದರಿಂದ ರಕ್ತದೊತ್ತಡ ಹೆಚ್ಚಾಗುವುದು,ಹೃದಯ ಬಡಿತ ಹೆಚ್ಚಾಗುವುದು,ಅಲ್ಸರ್ಸ್, ಕ್ಯಾನ್ಸರ್ ಬರುವುದು ಖಚಿತ, ಶಾಲಾ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ಮಾರಾಟ ಮಾಡುವುದು ಕಣ್ಣಿಗೆ ಬಿದ್ದರೆ 1800110456 ಸಹಾಯ ವಾಣಿಗೆ ದೂರು ಸಲ್ಲಿಸಲು ಸೂಚಿಸಲಾಯಿತು,
ಈ ಸಂದರ್ಭದಲ್ಲಿ ಎನ್.ಸಿ.ಡಿ ಆಪ್ತ ಸಮಾಲೋಚಕ ಮತ್ತು ಆರ್.ಕೆ.ಎಸ್.ಕೆ ಆಪ್ತ ಮಾಲೋಚಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, ನಂತರ ತಂಬಾಕು ಉತ್ಪನ್ನಗಳನ್ನು ನಾವು ಸೇವಿಸುವುದಿಲ್ಲ- ಇತರರನ್ನು ಸೇವಿಸಲು ಬಿಡುವುದಿಲ್ಲ ಎಂಬ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು,
 ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎರ್ರಿಸ್ವಾಮಿ, ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು