ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಲಕ್ಷ್ಮೇಶ್ವರ,ಏ22: ತಂಬಾಕು ಸೇವನೆಯಿಂದ ಕ್ಯಾನ್ಸರ್. ಅಲ್ಸರ್. ಹೃದಯಾಘಾತ ಸಂಭವಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕ ಬಿ.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಕೊಟ್ಟಾ ಕಾಯ್ದೆ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ಮಾಡಿ ಅವರು ಮಾತನಾಡಿದರು.
ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಪಾನ್ ಶಾಪ್ ಗಳಲ್ಲಿ ಬಹಿರಂಗವಾಗಿ ತಂಬಾಕು ಮಾರಾಟ ಮಾಡದಂತೆ ಸಲಹೆ ನೀಡಿ ದಂಡ ವಿಧಿಸಿದರು.
ಈ ವೇಳೆ ಆರೋಗ್ಯ ಇಲಾಖೆಯ ಪ್ರಕಾಶ ಕರ್ಜಗಿ ಮಾತನಾಡಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಇದರಿಂದ ಕ್ಯಾನ್ಸರ್. ಶ್ವಾಸಕೋಶದ ಕ್ಯಾನ್ಸರ್. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ರೋಗಿಗಳು ಬರುವ ಸಂಭವವಿದೆ ಎಂದು ಅವರು ಹೇಳಿದರು.
ಈ ವೇಳೆ ಬಿಇಓ ಜಿ.ಎಂ.ಮುಂದಿನಮನಿ. ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ. ಈಶ್ವರ ಮೆಡ್ಲೇರಿ. ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ. ಅಶೋಕ ಇಚ್ಚಂಗಿ. ರಾಜೇಂದ್ರ ಗಡಾದ. ಪೂರ್ಣಾಜಿ ಕರಾಟೆ. ಬಿ.ಎಂ.ಯರಗುಪ್ಪಿ. ವಾಸು ದೇಪಾಲಿ ಇದ್ದರು.