ತಂಬಾಕು ಸೇವನೆಯಿಂದ ಜಗತ್ತಿನಾದ್ಯಂತ ಸಾವಿರಾರು ಜನ ಬಲಿ

ಹೊನ್ನಾಳಿ.ಜೂ.೨; ತಂಬಾಕು ಸೇವನೆಯು ಗಂಭೀರವಾದ ಹಾಗೂ ಜಾಗತಿಕ ಸಮಸ್ಯೆಯಾಗಿದ್ದು,ಪ್ರತಿ ವರ್ಷ ತಂಬಾಕು ಸೇವನೆಯಿಂದ ಜಗತ್ತಿನಾಧ್ಯಂತ ಸಾವಿರಾರು ಜನ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಹೇಳಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತೋಟಗಾರಿಕೆ ಇಲಾಖೆ,ತಾಲೂಕು ಪಂಚಾಯತ್ ಹಾಗು ಪುರಸಭೆ ವತಿಯಿಂದ ಏರ್ಪಡಿಸಿದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆ ಬೆಳೆಯುವ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಂಬಾಕು ಸೇವನೆಯಿಂದ ಕ್ಯಾನ್ಸರ್ ಬಂದು ಬದುಕೇ ಕ್ಯಾನ್ಸಲ್ ಆಗುವಂತ ಪ್ರಕರಣಗಳೇ ಹೆಚ್ಚಾಗಿರುವುದು, ಆದ್ದರಿಂದ ರೈತರು ಅದಕ್ಕೆ ಎಷ್ಟೇ ಪ್ರೋತ್ಸಾಹ ನೀಡಿದ್ದರೂ ನೀವುಗಳು ತಂಬಾಕು ಬೆಳೆ ಬೆಳೆಯುವದನ್ನು ಬಿಟ್ಟು ಅದಕ್ಕೆ ಪರ್ಯಾಯ ಬೆಳೆ ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರು.ಆರೋಗ್ಯ ಇಲಾಖೆ ಸ್ವಯಂ ಸೇವಾಸಮಸ್ಥೆಗಳ ಮೂಲಕ ತಂಬಾಕು ಬೆಳೆಯಿಂದ ಹಾಗುವ ಹಾನಿಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು, ಹಾಗೂ ರೈತರು ಈ ಬೆಳೆ ಬಿಟ್ಟು ಇದಕ್ಕೆ ದುಪ್ಪಟ್ಟು ಲಾಭ ಬರುವ ಪರ್ಯಾಯ ಬೆಳೆಯನ್ನು ಬೆಳೆಯಲಿಕ್ಕೆ ಪ್ರೇರಣೆ ನೀಡಬೇಕು ಆಗ ಮಾತ್ರ ತಂಬಾಕು ಬೆಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತದೆ,ಆಗ ತಾನಾಗಿಯೇ ತಂಬಾಕು ಸೇವನೆ ಮಾಡುವವರ ಸಂಖ್ಯೆಯೂ ಕಡಿಮೆ ಆಗುತ್ತದೆ ಹಾಗೂ ಬಹುಮುಖ್ಯವಾಗಿ ಇಲ್ಲಿ ಬಂದಿರುವ ರೈತರು ತಂಬಾಕು ಸೇವನೆಯಿಂದಾಗುವ ಅನಾಹುತಗಳ ಬಗ್ಗೆ ಮನದಟ್ಟು ಮಾಡಿಕೊಂಡು ಈ ಬೆಳೆಗೆ ಪರ್ಯಾಯವಾಗಿ ಬೇರೆ ಬೆಳೆ ಬೆಳೆಯಿರಿ ಎಂದು ಹೇಳಿದರು.ಸ್ವಾಮೀಜಿಯವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಪ್ರಗತಿಪರ ರೈತ ನಾಗೇಂದ್ರಪ್ಪ ಅವರು ಇನ್ನು ಮುಂದೆ ತಂಬಾಕು ಬೆಳೆಯನ್ನು ಬೆಳೆಯುವುದಿಲ್ಲ ಎಂದು ಶ್ರೀಗಳಿಗೆ ಭರವಸೆ ನೀಡಿದರು.ಆಗ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಂಸೆ ವ್ಯಕ್ತವಾಯಿತು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ,ತಂಬಾಕು ಒಂದು ಮಾರಕ ಹಾಗೂ ವಿಷಕಾರಿ ಬೆಳೆ, ಈ ಬೆಳೆ ಬೆಳೆಯನ್ನು ಬೆಳೆಯುವುದರಿಂದ ಸಮಾಜದ ಆರೋಗ್ಯ ಕೆಡುವುದಲ್ಲದೆ ಮಣ್ಣಿನ ಫಲವತ್ತತೆ ಕಳೆದುಕೊಳ್ಳಬೇಕಾಗುತ್ತದೆ ಆದ್ದರಿಂದ ನಮ್ಮ ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳನ್ನು ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರು.ಒತ್ತಡದಲ್ಲಿರುವ ನೌಕರರು ಹಾಗೂ ಇನ್ನೀತರರು ತಂಬಾಕು ಉತ್ಪನ್ನಗಳ ಸೇವನೆ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ ಎಂಬ ನಿಲುವು ತಪ್ಪು, ಈ ಭ್ರಮೆಯಿಂದ ಒತ್ತಡಲ್ಲಿರುವವರು ಹೊರ ಬನ್ನಿ ಎಂದರು.ತೋಟಗಾರಿಕೆ ಇಲಾಖಾಧಿಕಾರಿ ರಮೇಶ್ ರೈತರಾದ ನಾಗೇಂದ್ರಪ್ಪ,ಶಿವನಕೇರಿ ಬಸವಲಿಂಗಪ್ಪ ಮಾತನಾಡಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ,ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ,ಪುರಸಭೆ ಮುಖ್ಯಾಧಿಕಾರಿ ನಿರಂಜನಿ,ಕAದಾಯಾಧಿಕಾರಿ ವಸಂತ್,ಜಿಲ್ಲಾ ಆರೋಗ್ಯ ಮೇಲ್ವೀಚಾರಕ ಎಂ.ವಿ.ಹೊರಕೇರಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಗೀತಾ,ಎನ್.ಎಚ್.ಆಶಾ ಕಾರ್ಯಕರ್ತರು ಇದ್ದರು.