ತಂಬಾಕು ಸೇವನೆಯನ್ನು ತಡೆಗಟ್ಟುವಲ್ಲಿ ಯುವಕರ ಜವಾಬ್ದಾರಿ ಮುಖ್ಯವಾದದ್ದು : ಟಿ.ಜಿ ವಿಠ್ಠಲ್


ಸಂಜೆವಾಣಿ ವಾರ್ತೆ
ಬಳ್ಳಾರಿ. ಮೇ 31 ಫ್ಯಾಮಿಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ  ಬಳ್ಳಾರಿ ಶಾಖೆಯು ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ ಇವರ ಇವರ ಸಂಯುಕ್ತಾಆಶ್ರಯದಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು /ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು 
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಫ್.ಪಿ.ಎ.ಐ ಅಧ್ಯಕ್ಷ ವಿಠ್ಠಲ್  ಕಾರ್ಯಕ್ರಮದ ಕುರಿತು ಮಾತನಾಡುತ್ತಾ,  ಸಾರ್ವಜನಿಕರ ಹಕ್ಕು ಮತ್ತು ಅಧಿಕಾರದಲ್ಲಿ ಅಡಗಿರುವ ನಮ್ಮ ಜವಾಬ್ದಾರಿಯನ್ನು ಓರುವಲ್ಲಿ ಯುವಕರಿಗೆ ಸಮಾಜಮುಖಿ ಜಾಗೃತಿ ಮೂಡಿಸಿ ಅವರಲ್ಲಿ ಅಡಗಿರುವ ಜವಾಬ್ದಾರಿಯನ್ನು ಬಡದಬ್ಬಿಸುವಲ್ಲಿ ಯಶಸ್ವಿ ಯಾದರು  ಏಕೆಂದರೆ ತಂಬಾಕಿನ ವ್ಯಸನದಲ್ಲಿ ಇರುವ ತೊಂದರೆಗಳ ಬಗ್ಗೆ ಕಾಳಜಿಯನ್ನು  ಮೂಡಿಸಿದರು.
ಎಫ್.ಪಿ.ಎ.ಐ ಶಾಖಾ ವ್ಯವಸ್ಥಾಪಕರು  ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ, ತಂಬಾಕು ವ್ಯಸನದಿಂದ ಆಗುವ ತೊಂದರೆಗಳು ಹಾಗೂ ಅದನ್ನು ಬಿಡುವ ಮಾರ್ಗಗಳನ್ನು ತಿಳಿಸುತ್ತಾ ಜೊತೆಗೆ ಹೆಚ್ ಪಿವಿ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ಅಲ್ಲಿನ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಮುಂದಿನ ಭವಿಷ್ಯದ ಶಿಕ್ಷಕರು ನೀವು ನಿಮ್ಮ ಮುಂದಿನ ಪೀಳಿಗೆಯ ಜನಾಂಗಕ್ಕೆ ಸಮಾಜಮುಖಿ ಕಾರ್ಯಗಳಲ್ಲಿ ಮಾರ್ಗದರ್ಶಕರಾಗಬೇಕು ಎಂದು ಹೇಳುತ್ತಾ ತಂಬಾಕು ವ್ಯಸನವನ್ನು ತಡೆಗಟ್ಟಲು ನಿಮ್ಮ ಕೈಯಲ್ಲಾದ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡಿ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಫ್.ಪಿ.ಎ.ಐ ಬಳ್ಳಾರಿ ಶಾಖೆಯ ಫೀಲ್ಡ್ ಆಫೀಸರ್ ಶ್ರೀಮತಿ ವಿಜಯಲಕ್ಷ್ಮಿ ರಾವ್ ಸ್ವಾಗತವನ್ನು ಕೋರಿದರು ಅದರಂತೆ ವಂದನಾರ್ಪಣೆಯನ್ನು ಶಾಖಾ ವ್ಯವಸ್ಥಾಪಕರು ಶ್ರೀಮತಿ ವಿಜಯಲಕ್ಷ್ಮಿ  ನಡೆಸಿಕೊಟ್ಟರು.