ಚಿತ್ರದುರ್ಗ.ಜೂ.೩: ತಂಬಾಕು ಮುಕ್ತ ಸಮಾಜಕ್ಕೆ ಯುವ ಜನತೆ ಕೈಜೋಡಿಸಿಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ತಿಳಿಸಿದರು.
ಇಲ್ಲಿನ ಅಮೃತ್ ನರ್ಸಿಂಗ್ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಪ್ರಜಾ ಸೇವಾ ಸಾಂಸ್ಕøತಿಕ ಕ್ರೀಡಾ ಸಂಘ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಅಮೃತ್ ನರ್ಸಿಂಗ್ ಕಾಲೇಜ್ ಇವರ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಂಬಾಕಿನಿಂದ ಆಗುವ ದುμÁ್ಪರಿಣಾಮಗಳ ಬಗ್ಗೆ ಯುವ ಜನತೆ ಎಚ್ಚರ ವಹಿಸಬೇಕು. ಯುವ ಜನತೆ ಹಾಗೂ ಸಾರ್ವಜನಿಕರು ತಂಬಾಕು ತ್ಯಜಿಸುವ ಕಡೆಗೆ ಗಮನ ನೀಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಕಾರ್ಯಕರ್ತರಾದ ತಿಪ್ಪೇಸ್ವಾಮಿ ಮಾತನಾಡಿ, ಸಾರ್ವಜನಿಕರು ತಂಬಾಕುನಿಂದಾಗುವ ದುμÁ್ಪರಿಣಾಮಗಳ ಕುರಿತು ತಿಳುವಳಿಕೆ ಪಡೆದು, ಇತರರಿಗೂ ಈ ರೋಗಗಳಿಂದಾಗುವ ಅನಾಹುತಗಳನ್ನು ತಿಳಿಸಿ ಜಾಗೃತಿ ಮೂಡಿಸಬೇಕೆಂದರು.ಕಾರ್ಯಕ್ರಮದಲ್ಲಿ ಅಮೃತ ನಸಿರ್ಂಗ್ ಕಾಲೇಜಿನ ಪ್ರಾಚಾರ್ಯರಾದ ವಜಾಹತ್ ಉಲ್ಲಾ, ಉಪನ್ಯಾಸಕರಾದ ವಾಣಿ, ಪ್ರಜಾ ಸೇವಾ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಓಂಕಾರಮ್ಮ ಉಪಸ್ಥಿತರಿದ್ದರು.