ತಂಬಾಕು ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಶ್ರಮಿಸಿ

ಇಂಡಿ:ಜೂ.2:ತಂಬಾಕು ಸೇವನೆಯಿಂದ ಕ್ಯಾನ್ಸರ್ ದಂತಹ ಮಾರಕ ರೋಗಗಳು ತಗಲುತ್ತವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದೆ ಎಂದು ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಎನ್‍ಸಿಡಿ ಘಟಕ ಸಹಯೋಗದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.

ಡಾ|| ಪ್ರೀತಿ ಕೋಳೆಕರ ಮಾತನಾಡಿ ಸಮಾಜಕ್ಕೆ ಮಾರಕವಾಗಿರುವ ತಂಬಾಕು ಸೇವನೆ ಬಗೆಗಿನ ಅಪಾಯಗಳ ಬಗ್ಗೆ ಜನ ಸಾಮಾನ್ಯರನ್ನು ಜಾಗೃತ ಮೂಡಿಸಬೇಕಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ಡಾ|| ರಮೇಶ ರಾಠೋಡ ಮಾತನಾಡಿ ಯುವಕರು ಗುಟಕಾ,ಸಿಗರೇಟು ಎಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಕಾರವೂ ಮುಖ್ಯ ಎಂದರು.

ಡಾ|| ಎಸ್.ಎಸ್.ಮೇತ್ರಿ, ಕೆ.ಜಿ.ಶೀಲವಂತ ಮಾತನಾಡಿದರು.

ವೇದಿಕೆಯ ಮೇಲೆ ಎನ್‍ಸಿಡಿಎ ಸಿಬ್ಬಂದಿ ಮಲ್ಲಿಕಾರ್ಜುನ ಸಿಂಗೆ,ಬಸವರಾಜ ಅಹಿರಸಂಗ, ವಿದ್ಯಾಹಳಗುಣಕಿ, ವಿಜಯಲಕ್ಷ್ಮೀ ಕುಂಬಾರ ಮತ್ತಿತರಿದ್ದರು.