ತಂಬಾಕು ಮಿಶ್ರಿತ ಗುಟ್ಕಾ ಸಾಗಾಟ: ಇಬ್ಬರು ಆರೋಪಿಗಳು ಬಂಧನ

ಹುಮನಾಬಾದ್: ಅ.25:ತಂಬಾಕು ಮಿಶ್ರಿತ ಗುಟ್ಕಾವನ್ನು ಕಲಬುರಗಿ ಕಡೆಯಿಂದ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಹೊರವಲಯದ ಹಳೆ ಚೆಕ್ ಪೆÇೀಸ್ಟ್ ಹತ್ತಿರದಲ್ಲಿ ಸಿಪಿಐ ಗುರು ಪಾಟೀಲ ನೇತೃತ್ವದಲ್ಲಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡು ವಾಹನ, ತಂಬಾಕು ಮಿಶ್ರಿತ ಗುಟ್ಕಾ ಸೇರಿ ಒಟ್ಟು ?72 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.