ತಂಬಾಕು ಮಳಿಗೆಗಳ ಮೇಲೆ ದಾಳಿ

ಇಂಡಿ:ಜು.28:ಪಟ್ಟಣದ ಬಸವೇಶ್ವರ ವೃತ್ತ, ವಿಜಯಪೂರ ರಸ್ತೆ ಮತ್ತು ಅಪ್ಸರಾ ಹೋಟೆಲ್ ಹತ್ತಿರ ಇರುವ 52 ಎಲೆ ಅಂಗಡಿಗಳ ಮೇಲೆ ದಾಳಿ ಮಾಡಿ ಅಂದಾಜು 4200 ರೂ ದಂಡ ಸಂಗ್ರಹಿಸಿದರು.

ತಂಬಾಕು ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಈ ಧಾಳಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಡಿ.ಎಸ್.ಕರ್ಜಗಿ ತಿಳಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಮಹಾಂತೇಶ, ವಿಭಾಗೀಯ ತಂಬಾಕು ನಿಯಂತ್ರಣ ಘಟಕದ ಶ್ರೀಕಾಂತ ಪೂಜಾರಿ, ಆರೋಗ್ಯ ಇಲಾಖೆಯ ಸುನಂದಾ ಅಂಬಲಗಿ, ಡಾ|| ಪ್ರಕಾಶ, ಅರಕ್ಷಕ ದಳ, ಪುರಸಭೆ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಇದ್ದರು.