ತಂಬಾಕು ನಿಯಂತ್ರಣ: ದಂಡ ಸಂಗ್ರಹ

ಧಾರವಾಡ, ನ.19: ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆರೋಗ್ಯ ಇಲಾಖೆಯ ತಂಬಾಕು ನಿಯಂತ್ರಣ ಕೋಶದಿಂದ ಕ್ರಮ ಕೈಗೊಂಡಿದ್ದು, ಕಳೆದ ಎಪ್ರಿಲ್ ದಿಂದ ಅಕ್ಟೋಬರ್ ವರೆಗೆ ಆರೋಗ್ಯ, ಪೆÇಲೀಸ್ ಇಲಾಖೆಯಿಂದ 2,587 ತನಿಖಾ ದಾಳಿ ಮಾಡಿದ್ದು, 3,16,410 ರೂ.ಗಳ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅವರು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ, ಮಾತನಾಡಿದರು.
ತಂಬಾಕು ನಿಯಂತ್ರಣಕ್ಕಾಗಿ ಪೆÇೀಲಿಸ್, ಪಾಲಿಕೆ ಮತ್ತು ಆರೋಗ್ಯ ಇಲಾಖೆ ಸಂಯುಕ್ತವಾಗಿ ತನಿಖಾ ದಾಳಿ ನಡೆಸಬೇಕು. ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳಿಂದ ತಂಬಾಕು ನಿಯಂತ್ರಣಕ್ಕೆ ಅನಕೂಲವಾಗುತ್ತದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ 804 ತನಿಖಾ ದಾಳಿ ಆಗಿದ್ದು, ರೂ.87,990 ದಂಡ ಸಂಗ್ರಹಿಸಲಾಗಿದೆ. ಮಹಾನಗರ ಪೆÇೀಲಿಸ್‍ರಿಂದ 710 ತನಿಖಾ ದಾಳಿಯಾಗಿದ್ದು, ರೂ.1,19,520 ಗಳ ದಂಡ ಮತ್ತು ಜಿಲ್ಲಾ ಪೆÇಲೀಸ್‍ರಿಂದ 1,073 ತನಿಖಾ ದಾಳಿ ಆಗಿದ್ದು, ರೂ 1,08,900 ದಂಡ ಸಂಗ್ರಹಸಲಾಗಿದೆ. ಒಟ್ಟು ಮೂರು ಇಲಾಖೆಗಳಿಂದ ಒಟ್ಟು 2,587 ತನಿಖಾದಾಳಿ ಆಗಿದ್ದು, 3,16,410 ರೂ.ಗಳ ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಮಾತನಾಡಿ, ತಂಬಾಕು ನಿಯಂತ್ರಣಕ್ಕಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಳೆದ ಎಪ್ರಿಲ್‍ದಿಂದ ವಿವಿಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆಯ ಯೋಜನೆಗಳ ಸಮರ್ಪಕ ಅನುμÁ್ಠನಕ್ಕೆ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಜರುಗಿಸಿ, ನಿರಂತರವಾಗಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.