ತಂಬಾಕು ಜಾಗೃತಿ ದಾಳಿ: ದಂಡ ವಸೂಲಿ

ಬೀದರ ಜು.29: ಬೀದರ ಹಾಗೂ ತಾಲ್ಲೂಕುಗಳಲ್ಲಿ ತಂಬಾಕು ಮಾರಾಟ ಮಳಿಗೆಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ನಗರ ಸಭೆ, ಆಹಾರ ಸುರಕ್ಷತೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಂಬಾಕು ಜಾಗೃತಿ ದಳದಿಂದ ಬೀದರ ಜಿಲ್ಲೆಯಲ್ಲಿ ಕೋಟಾ ಕಾಯ್ದೆ ಉಲ್ಲಂಘನೆ ಮಾಡಿದ ಒಟ್ಟು 42 ಅಂಗಡಿಗಳ ಮೇಲೆ ದಾಳಿ ಮಾಡಿ 2550 ರೂ. ದಂಡ ವಿಧಿಸಲಾಯಿತು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಿಗರೇಟ್ ಹಾಗೂ ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುವುದರಿಂದ ಈ ಉತ್ಪನ್ನಗಳ ಬಳಕೆಯನ್ನು ಮಾಡದಂತೆ ಜಾಗೃತರಾಗಲು ಮನವಿ ಮಾಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಕಾಶ್ ವಗ್ಗೆ, ಸಮಾಜಕರ್ತ ಮಹೇಶ ಬಿ. ತಾಲೂಕಾ ಆರೋಗ್ಯ ಇಲಾಖೆಯಿಂದ ಓಂಕಾರ ಮಲ್ಲಿಗೆ, ಆಹಾರ ಸುರಕ್ಷತೆ ಇಲಾಖೆಯಿಂದ ಕೀಶನ ರಾಠೋಡ ಮತ್ತು ಮನೋಹರ ಆಲಶೆಟ್ಟಿ, ಶಿಕ್ಷಣ ಇಲಾಖೆಯಿಂದ ಗುಂಡಪ್ಪಾ ಹುಡಗೇ, ಕಾರ್ಮಿಕ ಇಲಾಖೆಯಿಂದ ಕೆ.ಸುವರ್ಣಾ, ಚೌಬಾರಾ ಪೊಲೀಸ್ ಠಾಣೆಯಿಂದ ಡ್ಯಾಮಣ್ಣಾ ಮತ್ತು ದಯಾನಂದ ಇವರು ಈ ಜಾಗೃತಿ ದಾಳಿಯಲ್ಲಿ ಭಾಗವಹಿಸಿದ್ದರು.