ತಂಬಾಕು ಉತ್ಪನ್ನಗಳ ಮಾರಾಟ: ವ್ಯಕ್ತಿಗೆ ದಂಡ

ಕೆ.ಆರ್.ಪೇಟೆ:ಏ:21: ಮಂಡ್ಯ ಜಿಲ್ಲೆಯ ಎಲ್ಲಾ ವಿದ್ಯಾಸಂಸ್ಥೆಗಳನ್ನು ತಂಬಾಕು ಮುಕ್ತ ವಿದ್ಯಾಸಂಸ್ಥೆ ಗಳನ್ನಾಗಿಸುವ ನಿಟ್ಟಿನಲ್ಲಿ ವ್ಯಾಪ್ತಿಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯಲ್ಲಿ ತೊಡಗಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಸೆಕ್ಷನ್ 6ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತಲಾ 100/- ದಂಡ ವಿಧಿಸಲಾಯಿತು ಎಂದು ಜಿಲ್ಲಾ ಸಲಹೆಗಾರ ಎಸ್.ಎನ್. ತಿಮ್ಮರಾಜು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ ಮಾತನಾಡಿ ಇಂದು ಹೋಟೆಲ್, ಟೀ ಅಂಗಡಿ, ಮಾರುಕಟ್ಟೆ ಪ್ರದೇಶ, ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ಮಡೆಸಿ 19 ಪ್ರಕರಣ ದಾಖಲಿಸಿ ರೂ 2250/- ದಂಡ ವಿಧಿಸಲಾಯಿತು. ಒಟ್ಟಾರೆಯಾಗಿ 20 ಪ್ರಕರಣ ದಾಖಲಿಸಿ ರೂ 2350/- ದಂಡ ವಿಧಿಸಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅನಾನುಕೂಕೂಲಗಳ ಬಗೆಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣವನ್ನು ನೀಡಿ ಕರಪತ್ರಗಳನ್ನು ವಿತರಿಸಲಾಯಿತು.
ತಂಬಾಕು ಎಷ್ಟು ಅಪಾಯಕಾರಿ ಎಂಬುದನ್ನು ವ್ಯಸನಿಗಳಿಗೆ ಅರ್ಥೈಸಲಾಯಿತು. ವ್ಯಸನಮುಕ್ತ ಕೇಂದ್ರದ ನೆರವಿನಿಂದ ತಂಬಾಕು ಬಳಕೆಯಿಂದ ಹೊರಬರುವಂತೆ ಮನವಿ ಮಾಡಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮೇಲ್ವೀಚಾರಕರಾದ ವೆಂಕಟೇಶ್ ಬಿ ಎನ್, ಹಿರಿಯ ಆರೋಗ್ಯ ಸಹಾಯಕರಾದ ಧಮೇರ್ಂದ್ರ, ಸಮಾಜ ಕಾರ್ಯಕರ್ತ ಮೋಹನ್ ಕುಮಾರ್ ಹಾಜರಿದ್ದರು.