ತಂಪೆರೆದ ಮಳೆ

ಹೊಸಪೇಟೆ ಏ24: ಕಳೆದೆರಡು ದಿನ ರಾತ್ರಿ ಗುಡುಗು-ಸಿಡಿಲು ಸಹಿತ ಮಳೆಯಿಂದಾಗಿ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಗುರುವಾರ ರಾತ್ರಿ 10 ಗಂಟೆಯಿಂದ 11ರವರೆಗೂ ಹಾಗೂ ಶುಕ್ರವಾರ ರಾತ್ರಿ 8 ಗಂಟೆಯಿಂದ 11 ರವರೆಗೂ ಉತ್ತಮ ಮಳೆಯಾಗಿದ್ದು ವೀಕೆಂಡ್ ಲಾಕ್‍ಡೌನ್ ಮಳೆ ಜೊತೆ ಆರಂಭವಾದಂತಾಯಿತು. 9 ಗಂಟೆಗೆ ಪೊಲೀಸರು ನಿರ್ವಹಿಸಬೇಕಾದ ಕೆಲಸವನ್ನು ಮಳೆರಾಯ ಆರಂಭಿಸಿದಂತಾಯಿತು.
8 ಗಂಟೆಗೆ ಸರಿಯಾಗಿ ಆರಂಭವಾರ ಆರ್ಭಟ ವರ್ತಕರು ಸೇರಿದಂತೆ ಪ್ರತಿಯೊಬ್ಬರು ಮನೆಯತ್ತ ಮುಖಮಾಡುವಂತೆ ಮಾಡಿತು. ಆದರೂ ಮಳೆಯಲ್ಲಿ ನೆನೆದು ಮನೆ ಸೇರುವಂತಾಯಿತು. ಬಿಸಿಲಿನ ಬೇಗೆಯಿಂದ ಬೆಂದಿದ್ದ ನಿವಾಸಿಗಳಿಗೆ ಮಳೆ ಸ್ವಲ್ಪ ತಂಪೆರೆಯುವಂತೆ ಮಾಡಿದ್ದು ನಗರದಲ್ಲಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಇನ್ನು ಒಂದೆರಡು ದಿನ ಮಳೆಯಾಗುವ ಲಕ್ಷಣಗಳಿವೆ ಎಂದು ತಿಳಿಸಿದ್ದು ಸ್ಥಳೀಯರು ಸಮಾಧಾನವಾಗುವಂತಾಗಿದೆ.