ತಂಪು ಪಾನೀಯಗಳು

ಬೇಸಿಗೆ ಕಾಲದಲ್ಲಿ ಎಲ್ಲರೂ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಆರೋಗ್ಯಕರವಾದ ತಂಪು ಪಾನೀಯ ಮಾಡಿಕೊಳ್ಳಬಹುದು.
ಕೂಲ್ ಪುದಿನಾ ಜ್ಯೂಸ್:
ಸಕ್ಕರೆ – ಎರಡು ಚಮಚ ನೀರು – ಮೂರು ಚಮಚ
ನಿಂಬೆ ಹಣ್ಣು – ಒಂದು ಪುದಿನಾ – ಹತ್ತು ಎಲೆ
ಸೋಡ ಐಸ್ ಕ್ಯೂಬ್
ಮೊದಲಿಗೆ ಒಂದು ಬೌಲ್‌ಗೆ ಸಕ್ಕರೆ ಮತ್ತು ನೀರನ್ನು ಹಾಕಿ ಸಕ್ಕರೆ ಕರಗುವರೆಗೂ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಂದು ಗ್ಲಾಸ್‌ಗೆ ಪುದಿನ ಎಲೆ ಮತ್ತು ಸಣ್ಣಗೆ ಪೀಸ್ ಮಾಡಿದ್ದ ಒಂದು ನಿಂಬೆಹಣ್ಣು ಹಾಕಿ. ನಿಂಬೆ ರಸ ಬರೋವರೆಗೂ ಗ್ಲಾಸ್‌ನಲ್ಲಿಯೇ ಜಜ್ಜಿ. ನಂತರ ಅದಕ್ಕೆ ಮಿಕ್ಸ್ ಮಾಡಿಕೊಂಡಿದ್ದ ಸಕ್ಕರೆ ನೀರನ್ನು ಹಾಕಿ. ಈಗ ಐಸ್ ಕ್ಯೂಬ್ ಹಾಕಿ, ಗ್ಲಾಸ್ ತುಂಬ ಸೋಡ ಹಾಕಿದರೆ ತಣ್ಣೆಗೆ ಕುಡಿಯಲು ಕೂಲ್ ಪುದಿನಾ ಪಾನೀಯ ಸಿದ್ಧ.
ಕಲ್ಲಂಗಡಿ ಜ್ಯೂಸ್:
ಕಲ್ಲಂಗಡಿ – ಒಂದು ಬೌಲ್ ಪುದಿನ – ಐದುಎಲೆ
ಸಕ್ಕರೆ – ಎರಡು ಚಮಚ ಚಾಟ್ ಮಸಾಲ, ಬ್ಲಾಕ್ ಸಾಲ್ಟ್
ಕಟ್ ಮಾಡಿದ್ದ ಕಲ್ಲಂಗಡಿ, ಪುದಿನ ಎಲೆ, ಸಕ್ಕರೆ, ಅರ್ಧ ಚಮಚ ಚಾಟ್ ಮಸಾಲ, ಬ್ಲಾಕ್ ಸಾಲ್ಟ್ ಹಾಕಿ ರುಬ್ಬಿಕೊಳ್ಳಿ. ಈಗ ಅದನ್ನು ಸೋಸಿಕೊಂಡು, ಒಂದು ಗ್ಲಾಸ್‌ಗೆ ಐಸ್ ಕ್ಯೂಬ್ ಹಾಕಿ ಸ್ವಲ್ಪ ಚಾಟ್ ಮಸಾಲ ಹಾಕಿ ಸೋಸಿಕೊಂಡ ರಸವನ್ನು ಮಿಕ್ಸ್ ಮಾಡಿ.