ತಂಪು ಪಾನೀಯಗಳಲ್ಲಿ ಮಾದಕ ದ್ರವ್ಯ ಬೆರೆಸುತ್ತಿದ್ದ ವ್ಯಕ್ತಿಯ ಬಂಧನ

ಬೀದರ್: ಆ.1:ಅಬಕಾರಿ ಇಲಾಖೆ, ಪೆÇಲೀಸ್ ಇಲಾಖೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ದಿಕ್ಕುತಪ್ಪಿಸಿ ಕೆಲ ಸಮಾಜಘಾತಕ ಶಕ್ತಿಗಳು ಹೊಸ ಹೊಸ ವಿಧಾನಗಳನ್ನು ಅನುಸರಿಸಿ ತಂಪು ಪಾನೀಯ ಅಂಗಡಿಗಳು, ಕಿರಾಣಿ ಅಂಗಡಿಗಳು ಹಾಗೂ ಡಾಬಾಗಳಲ್ಲಿ ಮಾದಕ ದ್ರವ್ಯ ಹಾಗೂ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.

ಇದು ಅಬಕಾರಿ ಇಲಾಖೆ ಹಾಗೂ ಪೆÇಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಒಂದು ವರ್ಷದಲ್ಲಿ ಪೆÇಲೀಸರೇ ಅತಿ ಹೆಚ್ಚು ಏಳು ಪ್ರಕರಣಗಳಲ್ಲಿ 934 ಕೆ.ಜಿ. ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 8 ಪ್ರಕರಣಗಳಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಿ 145 ಕೆ.ಜಿ. ಒಣ ಗಾಂಜಾ, 3.686 ಕೆ.ಜಿ ಅಫೀಮು ಪೌಡರ್ ವಶಪಡಿಸಿಕೊಂಡಿದ್ದಾರೆ.

ಒಂದು ವರ್ಷದಲ್ಲಿ 1,598 ಲೀಟರ್ ಅಕ್ರಮ ಮದ್ಯ, 53.205 ಲೀಟರ್ ಹೊರ ರಾಜ್ಯದ ಮದ್ಯ, 20.250 ಲೀ. ಡಿಫೆನ್ಸ್ ಮದ್ಯ, 428.450 ಲೀಟರ್ ಬಿಯರ್, 145.500 ಲೀ. ಕಳ್ಳಭಟ್ಟಿ ಸಾರಾಯಿ, 198 ಲೀಟರ್ ಸೇಂದಿ ಹಾಗೂ 18 ಕೆ.ಜಿ. ಸಿ.ಎಚ್ ಪೌಡರ್ ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ಜುಲೈ 22ರಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮೈಲೂರಿನ ಗಾಂಧಿನಗರ ಕಾಲೊನಿಯಲ್ಲಿರುವ ಪಂಚಮುಖಿ ಶಿವಾನಿ ಕೂ???ಡ್ರಿಂಕ್ಸ್ ಸೆಂಟರ್ ಹಾಗೂ ನೌಬಾ??? ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸಾಫ್ಟ್‍ಡ್ರಿಂಕ್ಸ್ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.

ಸೇಂದಿ ಹಾಗೂ ಕಲುಷಿತ ಹೆಂಡ ಸೇರಿಸಿ ಹಳೆಯ ಬಿಯರ್ ಬಾಟಲಿಗಳಲ್ಲಿ ತುಂಬಿ ಅದಕ್ಕೆ ಬ್ರಾಂಡ್ ರೂಪದ ಸ್ಟಿಕ್ಕರ್ ಅಂಟಿಸಿ ತಂಪು ಪಾನೀಯ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಇದನ್ನು ಕುಡಿದ ಕೆಲ ಹೊತ್ತಿನಲ್ಲಿ ನಶೆ ಆಗುತ್ತಿದ್ದರಿಂದ ಯುವಕರು ಸೇವಿಸಲು ಆರಂಭಿಸಿದ್ದರು. ಮೈಲೂರಿನ ಒಬ್ಬ ವ್ಯಸನಿ ಮೂರು ಬಾಟಲಿ ಕುಡಿದು ಎರಡು ದಿನ ಪ್ರಜ್ಞೆ ಕಳೆದುಕೊಂಡ ನಂತರ ಪ್ರಕರಣ ಬಯಲಿಗೆ ಬಂದಿದೆ.

ತಮ್ಮ ಸ್ನೇಹಿತರೊಂದಿಗೆ ತಂಪುಪಾನೀಯ ಸೇವಿಸಲು ಕೂಲ್‍ಡ್ರಿಂಕ್ಸ್ ಅಂಗಡಿಗಳಿಗೆ ಬರುವ ಯುವಕ, ಯುವತಿಯರನ್ನು ಗುರುಯಾಗಿಸಿಕೊಂಡು ವ್ಯವಹಾರ ನಡೆಸಲಾಗುತ್ತಿತ್ತು. ಗುರುನಗರದ ಸ್ಮಾರಕಗಳ ಪ್ರದೇಶ, ಲಾಡಗೇರಿ, ನೌಬಾದ್ ಕೈಗಾರಿಕೆ ಪ್ರದೇಶ ಹಾಗೂ ಮೈಲೂರು ಪ್ರದೇಶದಲ್ಲಿ ಕಳ್ಳ ವ್ಯವಹಾರಗಳು ಇಂದಿಗೂ ಸಕ್ರಿಯವಾಗಿವೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾಗಿದ್ದ ಪ್ರಕಾಶ ನಿಕ್ಕಂ ಅವರು ನಗರದಲ್ಲಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ನಿಷೇಧಿಕ ಕೊರೆಕ್ಸ್ ಔಷಧಿಯನ್ನು ಪತ್ತೆ ಮಾಡಿ ಆರೋಪಿಗಳನ್ನು ಹಿಡಿದು ಜೈಲಿಗೆ ತಳ್ಳಿದ್ದರು. ಕೊರೆಕ್ಸ್ ಮೂಲತಃ ಔಷಧಿಯಾಗಿದ್ದರೂ ಕಾಲೇಜು ವಿದ್ಯಾರ್ಥಿಗಳು 10 ಎಂಎಲ್‍ನ ಎರಡು, ಮೂರು ಬಾಟಲಿ ಸೇವಿಸಿ ನಶೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.