ತಂಪು ನೀರಿನ ತತ್ರಾಣಿ ಈಗೆಲ್ಲಿ ?

ಕಲಬುರಗಿ:ಏ.13: ಕೆಲವೇ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ರೈತಾಪಿ ಜನರು ಹೊಲ ಗದ್ದೆಗಳಿಗೆ ನೀರನ್ನು ಈ ಪಾತ್ರೆಯಲ್ಲಿಯೇ
ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೆ ತತ್ರಾಣಿ ಎಂದು ಕರೆಯುವರು.
ಸ್ಥಳೀಯ ಕುಂಬಾರರೇ ಇದನ್ನು ತಯಾರಿಸಿ ಕೊಡುತ್ತಿದ್ದರು.ಈಗಿನ ಹಾಗೆ ಹೊಲಗದ್ದೆಗಳಲ್ಲಿ ಆಗ ನೀರಿನ ಸೌಕರ್ಯವಿರಲಿಲ್ಲ.ಮನೆಯಿಂದಲೇ ತೆಗೆದುಕೊಂಡು ಹೋಗುತಿದ್ದರು.ಇದರಲ್ಲಿ ನೀರು ತಂಪಾಗಿ ಇರುತ್ತಿತ್ತು.ಬಿರು ಬಿಸಿಲಲ್ಲಿಗುಟುಕು ನೀರು ಕುಡಿದರೆ
ಹೊಟ್ಟೆ ನೆತ್ತಿ ತಣ್ಣಗಾಗುತ್ತಿತ್ತು.
ಈಗಿನ ಹಾಗೆ ಪ್ಲಾಸ್ಟಿಕ, ತಾಮ್ರ, ಸ್ಟೀಲ್ ಬಾಟಲಗಳು ಇರಲಿಲ್ಲ. ಇದಕ್ಕೆ ಎರಡು ಬದಿಯಲ್ಲಿ ಹಗ್ಗವನ್ನು ಕಟ್ಟಿ ಹೆಗಲಿಗೆ ಹಾಕಿಕೊಂಡು ಕೃಷಿ ಚಟುವಟಿಕೆಗಳಿಗಾಗಿ ಹೊಲ ಗದ್ದೆಗಳಿಗೆ ಹೋಗುತ್ತಿದ್ದರು. ಪ್ಪಾಸ್ಟಿಕ ಯುಗದಲ್ಲಿ ತತ್ರಾಣಿ ಸಿಗುವದೇ ಅಪರೂಪವಾಗಿದೆ . ಕ ಇದರ ಬೇಡಿಕೆ ಇಲ್ಲದಿರುವಾಗ ಕುಂಬಾರರು ಸಹಜವಾಗಿ ತಯಾರಿಸುವದನ್ನು ನಿಲ್ಲಿಸಿದ್ದಾರೆ.