ತಂದೆ ಮಾಡಿದ ಸಾಲಕ್ಕೆ  ಮಕ್ಕಳಿಗೆ ಜೀತ


* ಕಾಂಗ್ರೆಸ್ ನಾಯಕಿ ದಾಳಿ
* ಜೀತದಿಂದ ಮಕ್ಕಳಿಗೆ ಮುಕ್ತಿ
* ಬ್ರೂಸ್ ಪೇಟೆಯಲ್ಲಿ ಪ್ರಕರಣ
* 30 ಸಾವಿರಕ್ಕಾಗಿ ಜೀತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,28- ತಂದೆ ಮಾಡಿದ ಕೇವಲ 30 ಸಾವಿರ ರೂಗಳಿಗೆ ಇಬ್ಬರು ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡ ಅಮಾನವೀಯ ಘಟನೆ ನಗರದಲ್ಲಿ ನಡೆದಿದ್ದು. ಮಕ್ಕಳನ್ನು ಕಾಂಗ್ರೆಸ್ ನಾಯಕಿ ಮಂಜುಳ ದಾಳಿ ಮಾಡಿ ಪೊಲೀಸರ ಮೂಲಕ ಜೀತದ ಮಕ್ಕಳಿಗೆ ಮುಕ್ತಿ ದೊರಕಿಸಿಕೊಟ್ಟಿದ್ದಾರೆ.
ಇಲ್ಲಿನ ಶ್ರೀರಾಂಪುರ ಕಾಲೋನಿಯ ನಿವಾಸಿ   ನಾಗರಾಜ ದಾದು ಎಂಬುವವರಿಂದ 30 ಸಾವಿರ ರೂ ಸಾಲ ಪಡೆದಿದ್ದ. ಕಳೆದ ಒಂದು ವರ್ಷದ ಹಿಂದೆ ಆತ ಸಾವನ್ನಪ್ಪಿದ್ದಾನೆ. ನಂತರ ಆತನ ಪತ್ನಿ ಸುನೀತ ಬಡತನದಲ್ಲಿ ನಾಲ್ಕು ಮಕ್ಕಳೊಂದಿಗೆ ಸಂಕಷ್ಟದಲ್ಲಿ ಜೀವನ ಸಾಗಿಸುವಾಗ. ದಾದು ಮತ್ತು ಆತನ ಪತ್ನಿ ಮುನ್ನಿ ಸಾಲ ಕಟ್ಟುವಂತೆ ಕೇಳಿದ್ದಾರೆ. ಮನೆಗೆಲಸ ಮಾಡಿ ಬದುಕುತ್ತಿದ್ದ ಸುನೀತ ಈಗ ಇಲ್ಲ ಎಂದಿದ್ದಕ್ಕೆ ಆಕೆಯ 15 ವರ್ಷದ ಬಾಲಕ ಮತ್ತು 9 ವರ್ಷದ ಬಾಲಕಿಯನ್ನು ಜೀತಕ್ಕೆ ಇಟ್ಟುಕೊಂಡಿದ್ದರಂತೆ.  ಜೊತೆಗೆ ಇನ್ನೊಬ್ಬ ಬಾಲಕಿಯೂ ಹೋಗಿ ಮುನ್ನಿ ಮತ್ತು ಬೀಬಿ ಅವರ ಮನೆಗೆಲಸ ಮಾಡುತ್ತಿದ್ದಳಂತೆ. ಮನೆಗೆಲಸಕ್ಕೆ ಹಣವನ್ನೂ ನೀಡುತ್ತಿರಲಿಲ್ಲವಂತೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಕಿರುಕುಳ ಬೇರೆ ಕೊಡುತ್ತಿದ್ದರಂತೆ.
ಇದನ್ನು ತಿಳಿದ ಕಾಂಗ್ರೆಸ್ ಪಕ್ಷದ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಮಂಜುಳ ಮತ್ತು ಮಾಜಿ ಅಧ್ಯಕ್ಷೆ ಸೌಭಾಗ್ಯ ಅಲ್ಲದೆ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಿನ್ನೆ ರಾತ್ರಿ ದಾಳಿ ನಡೆಸಿ ದಾದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಕ್ಕಳನ್ನು ಜೀತದಿಂದ ಮುಕ್ತಿಗೊಳಿಸಲು ಮುಂದಾಗಿದ್ದಾರೆ. ಪೊಲೀಸರು ಮತ್ತು ಮಾಧ್ಯಮದವರಿಗೂ ಮಾಹಿತಿ ನೀಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಶೇಕ್ಷಾವಲಿ ನಾಗರಾಜ ಸತ್ತಾಗ  ನೀವು ಯಾಕೆ ಬರಲಿಲ್ಲ. ಅವರಿಗೆ ಸಹಾಯವನ್ನು ನಾವು ಮಾಡಿದ್ದೇವೆ. ದೇಶದಲ್ಲಿ ನಿರುದ್ಯೋಗ ಮೊದಲಾದ ಹಲವಾರು ಸಮಸ್ಯೆ ಇವೆ ಅವನ್ನು ಬಗೆಹರಿಸಿ ಅದು ಬಿಟ್ಟು ನಾವೇನೋ ದೊಡ್ಡತಪ್ಪು ಮಾಡಿದಂತೆ ಬಂದಿದ್ದೀರಿ ಎಂದನಂತೆ.
ಅಲ್ಲದೆ ವಾಗ್ವಾದ ನಡೆಸಿ ಮಕ್ಕಳನ್ನ ನಮ್ಮ ಮನೆಯಲ್ಲಿ ಬಿಡು ಅಂತಾ  ನಾವೇನು ಹೇಳಲಿಲ್ಲ ಸಾಲ ಕಟ್ಟೋವರೆಗೂ ಇಲ್ಲೇ ಇರಲಿ ಎಂದು ಅವರೇ ಬಿಟ್ಟಿದ್ದಾರೆ.
ಅವರಿಗೆ ಊಟ ಹಾಕಿ  ಇಟ್ಟುಕೊಂಡಿದ್ದೇವೆ ಎಂದಿದ್ದಾನೆ.
ರಾತ್ರೀಯೆ ಮಕ್ಕಳ ತಾಯಿ ಸುನೀತ ಅವರನ್ನು ಕರೆಸಿ ಹೇಳಿಕೆ ಪಡೆದ ಬ್ರೂಸ್ ಪೇಟೆ ಪೊಲೀಸರಿಗೆ ಆಕೆ ಓರ್ವ ಬಾಲಕಿ ಮಾತ್ರ ಜೀತಕ್ಕಿದ್ದಳು. ಉಳಿದವರು ಸಹಾಯಕ್ಕೆ ಹೋಗಿರಬಹುದು ಎಂದು ಹೇಳಿದ್ದಾಳಂತೆ.
ಈ ಬಗ್ಗೆ  ಸ್ಥಳೀಯ ನಿವಾಸಿಗಳೂ ಮುನ್ನಿ ಹಾಗೂ ದಾದು ಮಕ್ಕಳಿಗೆ ಕೊಡ್ತಿದ್ದ ಚಿತ್ರ ಹಿಂಸೆ ಬಗ್ಗೆ ಪೊಲೀಸರುಗೆ ಮಾಹಿತಿ ನೀಡಿದ್ದಾರಂತೆ.
ಬ್ರೂಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ದಾದು, ಶೇಕ್ಷಾವಲಿ, ಮುನ್ನಿ, ಬೀಬಿ ವಿರುದ್ದ ದೂರು ನೀಡಿದ್ದಾರಂತೆ. ನಗರ ಡಿವೈಎಸ್ಪಿ  ಶೇಖರಪ್ಪ ಅವರು ಪ್ರಕರಣದ ಸತ್ಯಾಸತ್ಯೆಯ ಬಗ್ಗೆ ತನಿಖೆ ನಡೆಸಿದ್ದಾರಂತೆ. 
ನಗರ ಪ್ರದೇಶದಲ್ಲಿ ಅದೂ ಕೇವಲ‌ ಮೂವತ್ತು ಸಾವಿರಕ್ಕೆ ಜೀತ ಇಟ್ಟುಕೊಂಡಿದ್ದರ ಬಗ್ಗೆ ಯಾವ ಕ್ರಮ ಜರುಗಲಿದೆ ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ.

ಈ ಕಾಲದಲ್ಲೂ ಜೀತಕ್ಕೆ, ಅದೂ ಮಕ್ಕಳನ್ನು ಇಟ್ಟುಕೊಂಡಿದ್ದು ಮಹಾಪರಾಧ. ಸಾಲ ನೀಡಿದ್ದಕ್ಕೆ ಜೀತಕ್ಕೆ ಇಟ್ಟುಕೊಂಡ ಬಗ್ಗೆ ಸ್ವತಃ ಮಕ್ಕಳ ತಾಯಿ ಹೇಳಿಕೆ ನೀಡಿದ್ದಾಳೆ.‌ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು.
ಮಂಜುಳ  ಕಾಂಗ್ರೆಸ್ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ, ಬಳ್ಳಾರಿ. ‌

Attachments area