ತಂದೆ ಮಗಳ ಭಾವನಾತ್ಮಕ ಕತೆ `ಮಗಳೇ’ ಟ್ರೈಲರ್ ಬಿಡುಗಡೆ

ತಂದೆ-ಮಗಳ ಭಾವನಾತ್ಮಕ ಕಥೆ ಆಧರಿಸಿದ ” ಮಗಳೇ”  ಚಿತ್ರದ ಟ್ರೈಲರ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕ್ಕೆ ಸೋಮು ಕೆಂಗೇರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.ಮುಂದಿನ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ .

ಟ್ರೈಲರ್ ಬಿಡುಗಡೆ ಮಾಡಿದ ಸಾಹಿತಿ ನಾಗೇಂದ್ರ ಪ್ರಸಾದ್ ಹೊಸಬರ ಪ್ರಯತ್ನ ಯಶಸ್ವಿಯಾಗಲಿ ಶುಭ ಹಾರೈಸಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ  ಸೋಮು ಕೆಂಗೇರಿ, “ಮಗಳೇ” ಕಂಟೆಂಟ್ ಆಧಾರಿತ ಚಿತ್ರ.ಚಿತ್ರ‌ನೋಡಿ ಹೊಸಬರ ಪ್ರಯತ್ನವನ್ನು ಬೆಂಬಲಿಸಿ. ಚಿತ್ರ ಚೆನ್ನಾಗಿಲ್ಲ ಎಂದರೆ ಚಿತ್ರರಂಗದ ಕಡೆ ತಲೆ ಹಾಕುವುದಿಲ್ಲ ಎಂದರು.

ಚಿತ್ರ ಬಿಡುಗಡೆಗೆ ಕಷ್ಟ ಎದುರಾಗಿ ಬಿಡುಗಡೆ ಮಾಡಬಾರದು ಎಂದು‌ ನಿರ್ಧರಿಸಿದ್ದೆವು. ಸ್ನೇಹಿತರು ಆಪ್ತರಿಗೆ ಚಿತ್ರ ತೋರಿಸಿದಾಗ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಡುಗಡೆಗೆ ಮುಂದಾದೆವು.ಆಗ ನೆರವಿಗೆ ಬಂದವರೇ ಜಪಾನ್ ಸಂಗೀತ ನಿರ್ದೇಶಕ

ಮ್ಯಾಕಿನ್ ಮತ್ತು ಸಯೂರಿ ಅವರು ಅವರ ಸಹ ನಿರ್ಮಾಪಕರಾದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಮಾಡಿತ್ತಿದ್ದೇವೆ ಎಂದರು. ಇಂಪಾದ ಸಂಗೀತ, ಸುಮಧುರ ಹಾಡುಗಳಿದ್ದರೂ ಯಾವುದೇ ಆಡಿಯೋ ಕಂಪನಿ ಆಡಿಯೋ ಬಿಡುಗಡೆಗೆ ಮುಂದಾಗಲಿಲ್ಲ. ಆಗ ಪಿಆರ್‌ಕೆ ಕಂಪನಿ ಆಡಿಯೋ ಬಿಡುಗಡೆ ನಾವು ಮಾಡುತ್ತೇವೆ ಎಂದು ಮುಂದಾದರು.ಅಶ್ವಿನಿ‌ ಪುನೀತ್ ರಾಜ್ ಕುಮಾರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಇವತ್ತಿನ  ಪೀಳಿಗೆಯಲ್ಲಿ ಮಕ್ಕಳ ಜೊತೆ ಎಷ್ಟು ಎಚ್ಚರಿಕೆ  ಇರಬೇಕು ತಂದೆ ಅಥವಾ ತಾಯಿ ಪ್ರೀತಿ ಸಿಗಲಿಲ್ಲ ಅಂದರೆ ಏನಾಗಲಿದೆ ಎನ್ನುವುದು ಚಿತ್ತದ ತಿರುಳು ಎಲ್ಲರ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು.

ಜಾಪನ್‌ ಟೋಕಿಯೋ ‌ನಗರದ  ಮ್ಯಾಕಿನ್ ‌ಮಾತನಾಡಿ,ತಂದೆ ಮಗಳ ಭಾವಾನಾತ್ಮಕ ಕಥನ, ಸಂಗೀತಕ್ಕೆ ಯಾವುದೇ ಭಾಷೆ. ಇಲ್ಲಹೀಗಾಗಿ ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು

ಸುಪ್ರೀತಾ ರಾಜ್ ಮಾತನಾಡಿ, ಮಗಳ‌ ಪಾತ್ರ, ನಂಬಿ ಕೊಟ್ಟಿದ್ದಕ್ಕೆ ಧನ್ಯವಾದ ಚಿತ್ರ ನೋಡಿ ಹರಸಿ ಎಂದರೆ ತಂದೆ ಪಾತ್ರ ಮಾಡಿರುವ ಗುರುರಾಜ್ ಶೆಟ್ಟಿ,: ತಂದೆ ಅಪ್ಪ ಮಗಳ ಸಂಬಂದ,ಕೌಟಂಬಿಕ ಸಂಬಧದ ಮೇಲೆ ನಿಂತಿದೆ ಎಂದರು. ಮುರುಳೀಧರನ್ ಸಂಗೀತ, ಕೆಂಪರಾಜ್  ಸಂಕಲನ ಚಿತ್ರಕ್ಕಿದೆ.