ತಂದೆ -ಮಗನ ಬಾಂಧವ್ಯದ ಅನಾವರಣ

ವ್ಯಕ್ತಪಡಿಸಲಾಗದ ಭಾವನೆಗಳ ತೊಳಲಾಟದಲ್ಲಿ ಸಿಲುಕಿರುವ ಮಂದಿಗೆ ಒಂದಷ್ಟು ಧೈರ್ಯ ತುಂಬುವ ನಿಟ್ಟಿನಲ್ಲಿ ಸಿದ್ದ ಪಡಿಸಿರುವ ಕಿರು ಚಿತ್ರ “ ಡಿಯರ್ ಭಾರ್ಗವ”
ಹೇಳಿಕೊಳ್ಳಲಾದ ವಿಷಯಗಳನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು ಚಡಪಡಿಸುವ ಮನಸ್ಸುಗಳ ಜೊತೆಗೆ ತಂದೆ ಮಗನ ಬಾಂಧವ್ಯವನ್ನು ಅನಾವರಣ ಮಾಡುವ ಮೂಲಕ ಮನಸ್ಸಿನಲ್ಲಿ ಯಾವುದನ್ನು ಬಚ್ಚಿಟ್ಟುಕೊಳ್ಳಬೇಡಿ ಅದು ಪ್ರಕೃತಿಯ ನಿಯಮ ಎನ್ನುವುದನ್ನು ಕಿರುಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಹೇಶ್ ಬಂಗ್ ಮತ್ತವರ ತಂಡ ಮಾಡಿದೆ.
ಕನ್ನಡದ ಮಟ್ಟಿಗೆ ತೀರಾ ಅಪರೂಪ ಎನ್ನುವ ಮತ್ತು ಅದರ ಬಗ್ಗೆ ಮಾತನಾಡಲು ಹಿಂಜರಿಯವ ವಿಷಯವನ್ನು ಮುಕ್ತವಾಗಿ ಮಾತನಾಡಿಕೊಳ್ಳಿ ಎನ್ನುವದನ್ನು ಡಿಯರ್ ಭಾರ್ಗವ ಮೂಲಕ ನಿರ್ದೇಶಕ ರಾಮನಾಥ್ ಶಾನ್ ಭಾಗ್ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಮಹೇಶ್ ಬಂಗ್ ಮತ್ತು ಹಿರಿಯ ಕಲಾವಿದರಾದ ಸುಂದರ್ ವೀಣಾ ಮತ್ತು ಅರುಣಾ ಬಾಲರಾಜ್ ಸುತ್ತಲೇ ಕಿರುಚಿತ್ರವನ್ನು ತಯಾರು ಮಾಡಲಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಟ, ನಿರ್ಮಾಪಕ ಮಹೇಶ್ ಬಂಗ್, ಚಿತ್ರದಲ್ಲಿ ಕೊನೆಯವರೆಗೂ ಆ ವಿಷಯವನ್ನು ಕುತೂಹಲದಿಂದ ಕಾಪಾಡಿಕೊಂಡು ಬಂದಿದ್ದೇವೆ.ಅಲ್ಲಿಯವರೆಗೆ ಇವನು ಅವನಾ ಎನ್ನುವುದು ಗೊತ್ತಾಗುವುದಿಲ್ಲ ಎಷ್ಟರಮಟ್ಟಿಗೆ ಕುತೂಹಲ ಹೆಚ್ಚಿಸಲಿದೆ. ಅಲ್ಲಿಯ ತನಕ ತಂದೆ-ಮಗನ ಬಾಂಧವ್ಯ ತೊಳಲಾದ ಸುತ್ತಾ ಸಾಗಲಿದೆ.
ತಂದೆ ಪುತ್ರನಿಗೆ ಬರೆದ ಪತ್ರದಲ್ಲಿ “ಡಿಯರ್ ಬಾರ್ಗವ” ಎಂದು ಉಲ್ಲೇಖಿಸಿರುತ್ತಾರೆ. ಆ ವೇಳೆ ತಂದೆಯನ್ನು ಕಳೆದುಕೊಂಡಿರುವ ಆತ ಪತ್ರ ಓದಿ ಭಾವುಕನಾಗುತ್ತಾನೆ. ತಾನು ಯಾವ ವಿಷಯವನ್ನು ಯಾರಿಗೂ ಹೇಳಬಾರದೆಂದು ಬಚ್ಚಿಟ್ಟಿದ್ದೆನೋ ಅದು ತಂದೆಗೂ ಗೊತ್ತಾಗಿತ್ತು ಎನ್ನುವುದು ಆತನಿಗೆ ಅರಿವಾಗಲಿದೆ.
ಭಾರತದಲ್ಲಿ ಮಾತ್ರವಲ್ಲ ಮುಂದುವರಿದ ದೇಶ ಎಂದು ಹೇಳಿಕೊಳ್ಳುವ ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ಈ ವಿಷಯವನ್ನು ಮಾತನಾಡಲು ಹಿಂಜರಿಯುತ್ತಾರೆ. ಈ ರೀತಿಯ ಜನರು ಹಿಂಜರಿಯಬೇಡಿ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದೇವೆ ಎಂದರು.
ಗುರುಪ್ರಸಾದ್ ಛಾಯಾಗ್ರಹಣ, ಉದಿತ್ ಹರಿತಾಸ್ ಸಂಗೀತವಿದೆ. ಒಂದು ನಿರ್ದಿಷ್ಠ ಸಮುದಾಯವನ್ನು ಜಾಗೃತಿಗೊಳಿಸುವ ಉದ್ದೇಶ ತಿರುಳು ಹೊಂದಿದೆ.