ತಂದೆ ಪರವಾಗಿ ಪ್ರಚಾರ ಮಾಡಿದ ಮಗ ಶ್ರವಣಕುಮಾರ್ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.23:  ನಗರ ವಿಧಾನಸಭಾ ಚುನಾವಣೆ ಪ್ರಯುಕ್ತ ಗಾಲಿ ಶ್ರವಣ್ ಕುಮಾರ್ ರೆಡ್ಡಿ, ನೇತೃತ್ವದಲ್ಲಿ, ನಗರದ ಶ್ರೀರಾಂಪುರ ಕಾಲೋನಿ 16 ನೇ  ವಾರ್ಡಿನ ಉಮಾ ಶಂಕರ್ ಕಾಲೋನಿಯಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬಡವರ ಶ್ರಮಿಕ ವರ್ಗದವರ ಪರವಾಗಿ ಮಾಡಿರುವಂತಹ ಅನೇಕ ಯೋಜನೆಗಳು ಅಭಿವೃದ್ಧಿ ಕೆಲಸಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತಂದು. ಸಮಾಜದ ಪ್ರತಿಯೊಬ್ಬರಿಗೂ ನೆರವಾಗುವ ರೀತಿಯಲ್ಲಿವೆ ಎಂಬುದನ್ನು  ಜನರಿಗೆ ತಿಳಿಸಲಾಯ್ತು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖ ಮುಖಂಡರಾದ, ಟಿವಿ ಪ್ರಸಾದ್, ಮಚ್ಚಾ ಪ್ರಸಾದ್, ವೆಂಕಟೇಶ್, ಲೋಕೆ ರೆಡ್ಡಿ, ಅರ್ಜುನ್ ರೆಡ್ಡಿ,
ವಾರ್ಡಿನ ಪ್ರಮುಖ ಮುಖಂಡರು ಕಾರ್ಯಕರ್ತರು ಹಾಗೂ ಭಾಜಪದ ಮುಖಂಡರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು