ತಂದೆ, ನನ್ನ ನಡುವೆ ಗೊಂದಲವಿಲ್ಲ: ಸುನಿಲ್ ಬೋಸ್

ತಿ.ನರಸೀಪುರ: ಮಾ.29:- ಹಲವು ದಶಕಗಳಿಂದ ರಾಜಕೀಯಯದಲ್ಲಿ ಸಕ್ರಿಯರಾಗಿರುವ ನನ್ನ ತಂದೆಯವರನ್ನು ಕಾಂಗ್ರೆಸ್ ಪಕ್ಷ ತಿ.ನರಸೀಪುರ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಾಗಾಗಿ, ನನ್ನ ತಂದೆ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ ಎಂದು ಮಾಜಿ ವಸತಿ ಜಾಗೃತಿ ಸಮಿತಿ ಸದಸ್ಯ ಸುನಿಲ್ ಬೋಸ್ ಸ್ಪಷ್ಟಿಕರಣ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ನಮ್ಮ ತಂದೆಯವರು ನಂಜನಗೂಡು ಮೀಸಲು ಕ್ಷೇತ್ರಕ್ಕೆ ಅರ್ಜಿ ಹಾಕಿದ್ದ ಕಾರಣ ಸಹಜವಾಗಿ ನಾನು ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದೆ,ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ವರಿಷ್ಠರು ಹಲವು ಬಾರಿ ಚರ್ಚಿಸಿ ನನ್ನ ತಂದೆಯವರನ್ನೇ ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎಂದರು.
ನನ್ನ ತಂದೆ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಕಾರಣ ನನಗೆ ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವ ಆಶಾಭಾವನೆ ಇತ್ತು.2018ರಲ್ಲೂ ನಾನು ತಿ.ನರಸೀಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೆ, ರಾಹುಲ್ ಗಾಂಧಿಯವರು ವಿಧಾನ ಪರಿಷತ್ ಸದಸ್ಯನ್ನಾಗಿ ಮಾಡುವ ಭರವಸೆ ನೀಡಿ ನನ್ನ ತಂದೆಯವರನ್ನೇ ಕಣಕ್ಕಿಳಿಸಿದ್ದರು.ಆದರೆ,ಪಕ್ಷ ಅಧಿಕಾರಕ್ಕೆ ಬಾರದ ಹಿನ್ನೆಲೆಯಲ್ಲಿ ಅಸೆ ಕೈಗೂಡಲಿಲ್ಲ. ತಂದೆ-ಮಗನ ನಡುವೆ ಮುಸುಕಿನ ಗುದ್ದಾಟವಿದೆ ಎಂಬ ಉಹಾಪೆÇೀಹಗಳೆಲ್ಲ ಶುದ್ಧ ಸುಳ್ಳು .ನನ್ನ ತಂದೆಯ ಗೆಲುವಿಗಾಗಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಟೊಂಕಕಟ್ಟಿ ನಿಲ್ಲುವ ಭರವಸೆ ವ್ಯಕ್ತಪಡಿಸಿದರು.ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಕುಕ್ಕೂರು ಗಣೇಶ್,ಕಾಂಗ್ರೆಸ್ ಟೌನ್ ಅಧ್ಯಕ್ಷ ಅಂದಾನಿಗೌಡ ಇತರರು ಹಾಜರಿದ್ದರು.