ತಂದೆ-ತಾಯಿ ಬುದ್ಧಿವಾದ: ನೇಣು ಹಾಕಿಕೊಂಡು ಮಗ ಆತ್ಮಹತ್ಯೆ

ಕಲಬುರಗಿ,ಜೂ.27-ಮನೆಯಲ್ಲಿ ಸುಮ್ಮನೆ ಕುಳಿತ ಕಾಲಹರಣ ಮಾಡಬೇಡ ಕಾಲೇಜಿಗೆ ಹೋಗು ಎಂದು ತಂದೆ-ತಾಯಿ ಬುದ್ಧಿವಾದ ಹೇಳಿದಕ್ಕೆ ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ನಡೆದಿದೆ.
ರಾಕೇಶ ತಂದೆ ಗುಂಡೇಶ ಕುಮಸಿ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ದ್ವಿತಿಯ ಪಿಯುಸಿ ಓದುತ್ತಿದ್ದ ರಾಕೇಶ ಕಾಲೇಜಿಗೆ ಚಕ್ಕರ ಹೊಡೆದು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ. ಇದರಿಂದ ತಂದೆ-ತಾಯಿ ಕಾಲೇಜಿಗೆ ಹೋಗುವಂತೆ ಬುದ್ಧಿವಾದ ಹೇಳಿದ್ದರು. ಇದನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಛತ್ತಿಗೆ ದುಪ್ಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.