ತಂದೆ ತಾಯಿ ಗುರು ಹಿರಿಯರನ್ನ ಗೌರವಿಸುವುದನ್ನ ಕಲಿಯಬೇಕಾಗಿದೆ


ಸಂಜೆವಾಣಿ ವಾರ್ತೆ
ಸಂಡೂರು :ಏ:23: ಪ್ರತಿವೋರ್ವ ಜೀವಿಗೂ ಸಂಸ್ಕಾರ ಮುಖ್ಯ. ನಾವು ಸಂಸ್ಕಾರವಂತರಾದರೆ ಮಾತ್ರ ನಮ್ಮ ಭವಿಷ್ಯ ಉಜ್ವಲವಾಗಲು ಕಾರಣ ತಂದೆ ತಾಯಿಗಳು ಗುರುಹಿರಿಯ ಆಶೀರ್ವಾದೇವ ನಾವು ಉತ್ತಂಗಕ್ಕೇರಲು ಕಾರಣ. ತಂದೆ ತಾಯಿ ಗುರುಗಳನ್ನು ಗೌರವಾನ್ವಿತರಾಗಿ ಕಾಣುವುದು ಮುಖ್ಯ. ತಂದೆ ತಾಯಿ ಗುರುಹಿರಿಯರ ಆಶೀರ್ವಾದ ಇದ್ದರೆ ಮಾತ್ರ ಜಗತ್ತಿನ ಯಾವ ಮೂಲೆಗೂ ಹೋದರೂ ವಿಜಯಿಶಾಲಿಗಳಾಗಿ ಬರುವುದು ಖಚಿತ. ಭಾರತೀಯ ರಾದ ನಾವೇಲ್ಲರೂ ಒಂದೇ ಎನ್ನುವ ಮನೋಭಾವನೆ ಬರಬೇಕಾಗಿದೆ. ಯಾವುದೇ ಕೋಮಗಲಬಗೆಗೆ ಆಸ್ಪದ ವಾಗದಂತೆ ನಾವು ಮೊದಲು ಮನುಷ್ಯರಾಗಿ ಮಾನವೀಯ ಗುಣಗಳನ್ನ ಬೆಳೆಸಿಕೊಂಡು ಜಿವನ ಸಾಗಿಸಬೇಕಾದುದು ಅತೀ ಅವಶ್ಯವಾಗಿದೆ ಎಂದು ಧರ್ಮಗುರು ಖಾಜಾ ಮೌಲ್ವಿಯವರು ತಮ್ಮ ಮನದಾಳದ ಮಾತುಗಳನ್ನು ಆಡಿದರು.
ಅವರು ಪಟ್ಟಣದ ಸುಬಾಷ್‍ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಧರ್ಮಗುರುಗಳು ಸಮಾಜ ಬಾಂಧವರಿಗೆ ಧರ್ಮೋಪದೇಶ ನೀಡಿ ಮಾತನಾಡಿದರು. ಧರ್ಮ ಧರ್ಮ ಗಳಲ್ಲಿ ಸಂಘರ್ಷ ಬೇಡ. ಎಲ್ಲಾ ಧರ್ಮದ ಸಾರಗಳು ಒಂದೇ ಆಗಿದ್ದು, ನಾವೆಲ್ಲಾರೂ ಒಂದೇ ಕುಟುಂಬದ ಸದಸ್ಯರಂತಿದ್ದು, ನಾವೆಲ್ಲಾರೂ ಒಂದೇ ಮನೆಯ ಅಣ್ಣ ತಮ್ಮಂದಿರು ಎನ್ನುವ ಭಾವನೆ ಬಂದರೆ ಮಾತ್ರ ನಮ್ಮ ಜನುಮ ಸಾರ್ಥಕವಾಗುವುದು ಖಂಡಿತ ಎಂದು ಧರ್ಮಗುರುಗಳು ತಿಳಿಸಿದರು. ಈ ಸಂದರ್ಭದಲ್ಲಿ ಫಾರೂಕ್ ಅಹ್ಮದ್ ರೋಷನ್ ಜಮೀರ್ ಅಲಿ ಏಜೆನ್ಸಿ ಜಮೀರ್ ಸಾಬ್ ತಾಜ್ ಫಕೃಸಾಬ್ ಪಿ. ತಾಜುದ್ದೀನ್ ಇಮಾಮ್ ಸಾಹೇಬ್, ಖಾಸಿಂ ಸಾಬ್ ಇರ್ಫಾನ್ ಉಲ್ಲಾ ಅಲ್ಲದೇ ಹಲವಾರು ಮಹಾನೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.