ತಂದೆ-ತಾಯಿ ಋಣ ತೀರಿಸಿ

ಬೀದರ್: ನ.14:ತಂದೆ-ತಾಯಿ ಬಹಳಷ್ಟು ಕಷ್ಟ ಪಡುತ್ತಾರೆ. ಮಕ್ಕಳ ಸಂತಸಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಹೀಗಾಗಿ ತಂದೆ-ತಾಯಿಯ ಋಣ ಇಂದಿನ ಯುವ ಪೀಳಿಗೆ ತೀರಿಸಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಔರಾದ ತಾಲ್ಲೂಕಿನ ನರಸಿಂಹಪೂರ ತಾಂಡಾದ ಜೈ ಭವಾನಿ ದೇವಸ್ಥಾನದ 3ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳು ಯಾವ ಕಾರಣಕ್ಕೂ ತಂದೆ-ತಾಯಿ ಮನಸ್ಸು ನೋಯಿಸಬಾರದು. ಅವರೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಬೇಕು ಎಂದು ಸಲಹೆ ಮಾಡಿದರು.
ಜೀವನದಲ್ಲಿ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು. ಹೀಗಾಗಿ ಬಡತನವೇ ಇರಲಿ, ಸಿರಿತನವೇ ಇರಲಿ ಸಂತೃಪ್ತಿಯಿಂದ ಬದುಕಬೇಕು. ಕಷ್ಟದಲ್ಲಿ ಇರುವವರಿಗೆ ಕೈಲಾದ ಸಹಾಯ ಮಾಡಬೇಕು ಅಲ್ಲದೇ ನಾವು ಚೆನ್ನಾಗಿದರೆ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ ನಾವು ಕೆಟ್ಟರೆ ಯಾರು ಕೂಡಾ ನಮ್ಮ ಹತ್ತಿರ ಬರುವುದಿಲ್ಲ ಎಂದು ತಿಳಿಸಿದರು
ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಕುಟುಂಬದಲ್ಲಿ ಬಾಳಬೇಕು ಎಂದು ಸಲಹೆ ಮಾಡಿದರು.
ಹೆಡಗಾಪೂರ ಚಂದ್ರ ಮಹಾರಾಜ ತಾಂಡದ ಪೂಜ್ಯ ಶ್ರೀ ಝಪಾ ಮಹಾರಾಜ ಕಾರ್ಯಕ್ರಮದ ಸಾನಿಧ್ಯ ವಹಿಸಿದರು ಪ್ರಮುಖರಾದ ದೇವಸ್ಥಾನದ ಪೂಜಾರಿ ರಾಜು ಮಹಾರಾಜ, ಭೀಮಾಜಿ ಭಿಕ್ಕು ಚೌವಾಣ್, ಅಂಬ್ರಿಷ ಗೋವಿಂದ ಚೌವಾಣ್, ಬನಸಿ ದೇನಾ ಪವರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಿಂದ ಜೈ ಭವಾನಿ ದೇವಸ್ಥಾನದ ವರೆಗೆ ಡಾ. ಬಸವಲಿಂಗ ಅವಧೂತರ ಮೆರವಣಿಗೆ ನಡೆಯಿತು. .