ತಂದೆ ತಾಯಿ ಆರೈಕೆ ನಮ್ಮ ಜವಾಬ್ದಾರಿ

ಕೋಲಾರ,ಸೆ೬ತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ನಮಗೆ ಜನ್ಮಕೊಟ್ಟ ತಂದೆತಾಯಿ ಮಾತ್ರ ಅವರನ್ನು ಗೌರವಿಸುವ ಜೊತೆಗೆ ಸಾಯುವವರೆಗೂ ಜೊತೆಯಲ್ಲಿ ಇದಗದು ಆಕೆ ಮಾಡುವುದು ಕೂಡ ನಮ್ಮ ಜವಾಬ್ದಾರಿ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ತಿಳಿಸಿದರು.
ನಗರದಲ್ಲಿ ಸೋಮವಾರ ಕಾಮಧೇನು ಧಾನ್ಯ ಮಿತ್ರ ಬಳಗ ವತಿಯಿಂದ ಮಾತೃದೇವೋಭಾವ ಪಿತೃದೇವೋಭಾವದ ಅಂಗವಾಗಿ ಮಕ್ಕಳಿಂದ ಪಾದಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅನಾದಿ ಕಾಲದಿಂದಲೂ ದೇವರನ್ನು ಮತ್ತು ದೈವವನ್ನು ನಂಬಿ ನಡೆಯುವ ಪರಂಪರೆ ನಮ್ಮದು ಅಂತಹ ಪರಂಪರೆ ಕಡಿಮೆಯಾಗುತ್ತಾ ಇದ್ದು ಜನ್ಮ ಕೊಟ್ಟ ತಂದೆ ತಾಯಿಯನ್ನು ಗೌರವಿಸುವುದನ್ನು ಮೊದಲು ನಾವು ಎಲ್ಲರೂ ಕಲಿಯಬೇಕು ಮನುಷ್ಯ ಗುರು ಹಿರಿಯರಿಗೆ ತಗ್ಗಿಬಗ್ಗಿ ನಡೆಯುವುದರಿಂದ ನಮ್ಮ ನಡೆ ಸುಗಮವಾಗುತ್ತದೆ ಹಿಂದೆ ಹಿರಿಯರು ದೇವಸ್ಥಾನಗಳನ್ನು ನಿರ್ಮಿಸಿ ಆಚರಣೆಗಳ ಕಟ್ಟುಪಾಡು ಹಾಕಿಕೊಟ್ಟಿದ್ದಾರೆ ಅದರ ಸಂಸ್ಕೃತಿ ಮತ್ತು ಪರಂಪರೆ ಕಡಿಮೆಯಾಗುತ್ತಾ ಇದ್ದು ಕಣ್ಣು ಮುಂದಿನ ತಂದೆ ತಾಯಿ ದೇವರುಗಳಾಗಿ ಕಾಣಬೇಕಾಗಿದೆ ಎಂದರು.
ಸಮಾಜದಲ್ಲಿ ಮನುಷ್ಯನ ಜೀವನವೇ ಮುಖ್ಯವಾಗಿದೆ ಅಂತಹ ಸಂದರ್ಭದಲ್ಲಿ ಸಮಾಜಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ನಾವು ಎಲ್ಲರೂ ಮೈಗೂಡಿಸಿಕೊಂಡು ಹೋಗಬೇಕು ಸಾಧ್ಯವಾದರೆ ಮತ್ತೊಬ್ಬರಿಗೂ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಮಧೇನು ಧಾನ್ಯ ಮಿತ್ರ ಬಳಗ ಅಧ್ಯಕ್ಷ ಶ್ರೀನಿವಾಸಮೂರ್ತಿ ಮಾತನಾಡಿ ಮಕ್ಕಳು ಈ ಕಲಿಯುಗದಲ್ಲಿ ತಂದೆತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು ಜನ್ಮಕೊಟ್ಟವರಿಗೆ ಅನಾಥ ಆಶ್ರಮಗಳಿಗೆ ಸೇರಿಸುವುದಲ್ಲ ಜೊತೆಯಲ್ಲಿ ಇದ್ದು ಪ್ರೀತಿಯಿಂದ ಹಾರೈಕೆ ಮಾಡಬೇಕು ಅದು ಮನುಷ್ಯನಾಗಿ ಹುಟ್ಟಿದ್ದಕ್ಕೂ ಹೆಮ್ಮೆಯಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಕಾಮಧೇನು ಧಾನ್ಯ ಮಿತ್ರ ಬಳಗದ ಕಾರ್ಯದರ್ಶಿ ಬಿ.ಎಸ್ ಪ್ರಭಾಕರ್, ಮುಖಂಡರಾದ ನಾಗೇಶ್ ಬಾಬು, ನಾಗಾರ್ಜುನ, ರಮೇಶ್, ಮನೋಹರ್, ಸುಬ್ರಮಣಿ, ಸತ್ಯವತಿ ಕಾಂತಮ್ಮ,ಗೀತಾರಾಣಿ, ಬಾಬು, ರವಿಕುಮಾರ್, ಮುಂತಾದವರು ಇದ್ದರು