
ಕೋಲಾರ,ಏ,೨೮- ವಿಶ್ವದಲ್ಲಿ ನಮಗೆ ಜನ್ಮ ನೀಡಿದ ತಂದೆ ತಾಯಿಗಳೇ ನಮ್ಮ ಮನೆ ದೇವರು. ಕಣ್ಣಿಗೆ ಕಾಣುವ, ಕರೆದಾಗ ಬರುವ, ಕಷ್ಠವೆಂದಾಗ ಕರುಣೆ ತೋರಿ ಕಾಪಾಡುವ, ನಮಗೆ ಸಂತೋಷ ನೀಡಿ ನಲಿದಾಡುವ ನಮ್ಮ ಬದುಕಿನ ದಾರಿ ದೀಪದ ದೇವರುಗಳೇ ಸತ್ಯವಂತ ನಮ್ಮ ತಂದೆ ತಾಯಿ.ಎಂದು ಡಾ. ಪೋಸ್ಟ್ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ವೀರಾಪುರ ಗೇಟ್ ಬಳಿ ಇರುವ ಸದ್ಗುರು ಯೋಗಿನಾರೇಯಣ ಮಠದಲ್ಲಿ ಪೋಸ್ಟ್ ನಾರಾಯಣಸ್ವಾಮಿರವರ ತಂದೆ ಬಂಗವಾದಿ ಸಾದು ಮುನಿಸ್ವಾಮಪ್ಪ ಭಾಗವತ್ ರವರ ೧೬ನೇ ವರ್ಷದ ವಾರ್ಷಿಕ ಆರಾಧನೆ ಮತ್ತು ಗುರುಪೂಜೆ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧಾ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂದೆ ತಾಯಿಗಳನ್ನು ನೋಯಿಸಬೇಡಿ, ಅವರ ಸೇವೆ ಆರಾಧನೆ ಮಾಡುವುದರಿಂದ ಎಲ್ಲಾ ದೇವರುಗಳ ಆರ್ಶೀವಾದ ಸಿಗುತ್ತದೆ. ವೃದ್ಧಾಶ್ರಮಕ್ಕೆ ಕಳುಹಿಸದೆ ಅವರ ಜೀವ ಇರುವವರೆಗೂ ಅವರನ್ನು ಮಕ್ಕಳ ತರಹ ಸಲುಹಿ ಸಾಕಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧಾತ್ಮಕ ಸಂಗೀತ ಭಜನೋತ್ಸವದಲ್ಲಿ ಡಾ. ಪೋಸ್ಟ್ ನಾರಾಯಣಸ್ವಾಮಿ ರಚಿಸಿದ ಕೀರ್ತನೆಗಳು ಮತ್ತು ತತ್ವಗಳನ್ನು ಹಾಡಿ ಪ್ರಥಮ ಬಹುಮಾನ ಭಗವಾನ್ ಸಿಂಗ್ ಭಜನಾ ತಂಡ ಕೊಂಡೇನಹಳ್ಳಿ ಮತ್ತು ಬಂಗವಾದಿ ಭಜನಾ ತಂಡ, ದ್ವಿತೀಯ ಬಹುಮಾನವನ್ನು ವಡಗೂರು ರಾಮಪ್ಪ ಭಜನಾ ತಂಡ ಮತ್ತು ಕೆಂಬೋಡಿ ವೆಂಕಟೇಶಪ್ಪ ಪೊಲೀಸ್ ಇಲಾಖೆ ತಂಡ ತೃತೀಯ ಬಹುಮಾನವನ್ನು ಶ್ರೀನಿವಾಸಯ್ಯ ತಂಡ, ಅರಳಿಮರದಹೊಸಹಳ್ಳಿ ಮತ್ತು ಜಯಲಕ್ಷ್ಮ್ಮ ಭಜನಾ ತಂಡ ಗಲ್‌ಪೇಟೆ ಕೋಲಾರ, ನಾಲ್ಕನೇ ಬಹುಮಾನವನ್ನು ಸಿದ್ದಿ ಸಮಾದಿ ಯೋಗ ತಂಡ ಗಲ್‌ಪೇಟೆ ಇವರುಗಳು ಪಡೆದುಕೊಂಡರು.
ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಈನೆಲ ಈಜಲ ಸಂಸ್ಥೆಯ ಅಧ್ಯಕ್ಷರಾದ ಬಿ.ವೆಂಕಟಾಚಲಪತಿ, ನಿವೃತ್ತ ಎಲ್.ಐ.ಸಿ ಅಧಿಕಾರಿ ಆರ್.ರಾಮಪ್ಪ ಹಾಗೂ ಕಲಾವಿದರಾದ ವಡಗೂರು ನಾರಾಯಣಮ್ಮ ರವರಿಗೆ ನೀಡಿ ಗೌರವಿಸಲಾಯಿತು.
ಯೋಗಿ ನಾರೇಯಣ ಮಠದ ಸಂಸ್ಥಾಪಕ ಧರ್ಮದರ್ಶಿಗಳಾದ ಗೋವಿಂದಸ್ವಾಮಿ ಭಗವಾನ್‌ಸಿಂಗ್, ಮಾರ್ಜೇನಹಳ್ಳಿ ನಾಗೇಶ್, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಚಿಟ್ನಹಳ್ಳಿ ರಾಮಚಂದ್ರ, ರಾಧಮ್ಮ, ವೆಂಕಟರೆಡ್ಡಿ, ರುಕ್ಮಿಣಿಯಮ್ಮ, ಆರ್.ರತ್ನಮ್ಮ, ಎಲ್.ರತ್ನಮ್ಮ, ಎಂ. ಕೃಷ್ಣಪ್ಪಸ್ವಾಮಿ,ಮುಂತಾದವರು ಭಾಗವಹಿಸಿದ್ದರು.