ತಂದೆ-ತಾಯಿಗೆ ಗೌರವ ನೀಡಿ

ಕಲಬುರಗಿ,ನ.25-ತಂದೆ-ತಾಯಿಗೆ ಪ್ರತಿ ನಿತ್ಯ ಮಕ್ಕಳು ಪಾದಪೂಜೆ ಮಾಡಿದರೆ, ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಇಂದಿನ ಸಮಾಜದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಬಾಲ್ಯದಲ್ಲಿ ಸಮಾಜದಲ್ಲಿ ಹೇಗೆ ಬದುಕು ರೂಪಿಕೊಳ್ಳಬೇಕು. ತಂದೆ-ತಾಯಿ, ಗುರು ಹಿರಿಯರ ಜತೆಗೆ ಗೌರವಯುತವಾಗಿ ನಡೆದುಕೊಳ್ಳುವ ಸಂಸ್ಕಾವನ್ನು ಮಕ್ಕಳು ಕಲಿತುಕೊಳ್ಳಬೇಕು ಎಂದು ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷೆ ಶರಣಮ್ಮ ಮಾಲಿಪಾಟೀಲ ಹೇಳಿದರು.
ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ದಿ.ಬಿ.ಸುರೇಖಾ ಸ್ಮಾರಕ ವೆಲ್ಫೆರ್ ಸೊಸೈಟಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಸಂಸ್ಥೆಯಿಂದ ದಿ.ಬಿ.ಸುರೇಖಾ ಅವರ ದ್ವಿತೀಯ ಪುಣ್ಯಾರಾಧನೆ ಪ್ರಯುಕ್ತ ಶಿಕ್ಷಣ, ಪತ್ರಿಕಾ ರಂಗ, ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಂದೆ ತಾಯಿಗಳನ್ನು ಪ್ರಿತಿಯಿಂದ ಕಾಣಬೇಕು, ಅವರ ಮಾತಿಗೆ ಬೆಲೆಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಅವರು ಮಾತನಾಡಿ, ತಂದೆ-ತಾಯಿ ನಿಜವಾದ ದೇವರು. ಅವರ ಆಶೀರ್ವಾದವಿದ್ದರೆ ಮಗು ಏನೆಲ್ಲಾ ಸಾಧಿಸಬಹುದು. ಮಕ್ಕಳಿಂದ ಹಿಡಿದು ಯುವಕರು ಸಂಸ್ಕøತಿ, ಸಂಸ್ಕಾರ ಬೆಳೆಸಿಕೊಳ್ಳಬೇಕು, ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವುದು ನಿಲ್ಲಬೇಕು ಎಂದರು.
ದಿ.ಬಿ.ಸುರೇಖಾ ಸ್ಮಾರಕ ವೆಲ್ಫೆರ್ ಸೊಸೈಟಿ ಅಧ್ಯಕ್ಷ ಶಂಕರ ಕೋಡ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಸನೂರ ಗ್ರಾಪಂ ಅಧ್ಯಕ್ಷ ಸಂಗಮ್ಮ ಪಾಟೀಲ್, ವಿನಾಯಕ ಕೋಡ್ಲಾ, ಡಾ.ಚಂದ್ರಿಕಾ ಕೋಡ್ಲಾ, ವಿಜಯೇಂದ್ರ ಎಸ್., ಬಿ.ಎಸ್.ಮಾಲಿಪಾಟೀಲ್, ಲತಾ ಕೋಡ್ಲಾ, ಅಶ್ವಿನಿ ಕೋಡ್ಲಾ ಉಪಸ್ಥಿತರಿದ್ದರು. ಡಾ.ಜಗನ್ನಾಥ ಕಲಶೆಟ್ಟಿ ಸ್ವಾಗತಿಸಿದರು. ಸಂಗೀತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ವಿಶೇಷ ಸನ್ಮಾನ:
ಶಿಕ್ಷಣ ಕ್ಷೇತ್ರದಲ್ಲಿ ಸಧನೆ ಮಾಡಿದ ಎಸ್.ಎಸ್.ಪಾಟೀಲ್, ಸುರೇಖಾ, ಶಿವಯೋಗಿ, ಅರುಣಾ ಮಠಪತಿ, ಮಹಾದೇವಿ ಕಲಶೆಟ್ಟಿ, ಮುಜುಬರ ರೆಹಮಾನ್, ಪತ್ರಿಕಾ ರಂಗ: ಚಂದ್ರು ಹಿರೇಮಠ, ರಾಜಶೇಖರಯ್ಯ, ನಾಗರಾಜ ಹೂವಿನಹಳ್ಳಿ, ದೇವಿಂದ್ರಪ್ಪ ಅವಂಟಿ, ಸಂತೋಷ ನಾಡಗಿರಿ, ವೈದ್ಯಕೀಯ ಕ್ಷೇತ್ರ: ನವಿರಾ, ತ್ರಿವೇಣಿ, ವೌನೇಶ್ವರಿ, ಟಿವಿ,ಚಾನೆಲ್: ಸಂಗಮೇಶ್ವರ ಸ್ವಾಮಿ. ಸಂಗೀತಾ, ಅಮರ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಗೌರವ ಧನ ನೀಡಿ ಸನ್ಮಾನಿಸಲಾಯಿತು.