ತಂದೆ ಕಿರುಕುಳ ಬಾಲಕಿಯ ರೋಧನೆ


ಬೆಂಗಳೂರು,ಡಿ.೨೫-ಸ್ವಂತ ಮಗಳಿಗೆ ತಂದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿರುವ ಘಟನೆ ಸಂಪಿಗೆ ಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ತಂದೆಯ ಕಿರುಕುಳದ ಇಂಚಿಂಚು ಮಾಹಿತಿಯನ್ನು ಸಂತ್ರಸ್ತ ಮಗಳು ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು ಅದನ್ನು ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಂದೆ ರಾಹುಲ್ ತನ್ನ ೧೦ ವರ್ಷದ ಮಗಳ ಮೇಲೆಯೇ ಪೈಶಾಚಿಕ ಕೃತ್ಯ ಎಸಗಿರುವುದು ಡೈರಿಯಲ್ಲಿನ ಬರಹದಿಂದ ಗೊತ್ತಾಗಿದೆ. ರಾಹುಲ್? ತನ್ನ ಪತ್ನಿ ಅಂಜಲಿ ಜತೆ ಮೂರು ವರ್ಷಗಳ ಹಿಂದೆಯೇ ವಿಚ್ಛೇಧನ ಪಡೆದುಕೊಂಡಿದ್ದು ಅಲ್ಲಿಂದಲೂ ರಾಹುಲ್ ಮಗಳನ್ನು ನೋಡಿಕೊಳ್ಳುತ್ತಿದ್ದ. ಮೂರು ವರ್ಷಗಳಿಂದ ವಿಚ್ಛೇಧಿತ ಪತ್ನಿಗೆ ಮಗಳನ್ನು ನೋಡಲು ಅವಕಾಶ ನಿರಾಕರಿಸಿದ್ದ.
ಇನ್ನು ಮಗಳು ಸ್ನಾನ ಮಾಡುವಾಗ ಬಾಗಿಲು ಹಾಕಿ ಕೊಳ್ಳದಂತೆ ಹಿಂಸೆ ನೀಡುತ್ತಿದ್ದನಂತೆ. ಅಲ್ಲದೆ, ನೀನು ದಪ್ಪಾ ಆಗಿದೀಯ ಎಂದು ವಾರದಲ್ಲಿ ಎರಡು ದಿನ ಊಟವನ್ನೇ ನೀಡುತ್ತಿರಲಿಲ್ಲವಂತೆ. ತಾಯಿ ಅಂಜಲಿ ಅದೆಷ್ಟೇ ಬಾರಿ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇತ್ತ ತಂದೆಯ ಕಾಟ ತಾಳಲಾರದೆ ತಾಯಿಗೆ ಕರೆ ಮಾಡಿ ಮಗಳು ಮಾಹಿತಿ ನೀಡಿದ್ದಾಳೆ. ಬಳಿಕ ಎಚ್ಚತ್ತ ಅಂಜಲಿ ಮಗಳು ಕೊಟ್ಟ ಮಾಹಿತಿ ಮೇರೆಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯ ವಿಚಾರಣೆ ನಡೆಸುತ್ತಿದ್ದಾರೆ.
ಕೋರ್ಟ್‌ನ ಆದೇಶದಂತೆ ಮಕ್ಕಳನ್ನು ಇಬ್ಬರು ಪಾಲನೆ ಪೋಷಣೆ ಮಾಡಬಹುದೆಂದು ಕೌಟಂಬಿಕ ನ್ಯಾಯಾಲಯ ಸೂಚನೆ ನೀಡಿತ್ತು